ಕಲಬುರಗಿ: ಪಾಲಿಕೆ ನೂತನ ಉಪ ಆಯುಕ್ತೆ ಪ್ರಮೀಳಾ ಎಂ.ಕೆ ಗೆ ಹೋಟೆಲ್ ಸಂಘದಿಂದ ಅಭಿನಂದನೆ

Upayuktha
0


ಕಲಬುರಗಿ: ಮಹಾನಗರ ಪಾಲಿಕೆ ಕಲಬುರಗಿ ಇದರ ನೂತನ ಡೆಪ್ಯುಟಿ ಕಮಿಷನರ್ ಆಗಿ ಗುರುವಾರ (ಜೂನ್19) ರಂದು ಅಧಿಕಾರ ಸ್ವೀಕರಿಸಿದ ಶ್ರೀಮತಿ ಪ್ರಮೀಳಾ ಎಂ. ಕೆ ಅವರಿಗೆ ಕಲಬುರಗಿ ಜಿಲ್ಲಾ ಹೋಟೆಲ್, ಬೇಕರಿ ಮತ್ತು ವಸತಿ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ನೇತೃತ್ವದಲ್ಲಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.


ಆಯ್ಕೆ ಶ್ರೇಣಿಯ ಹಿರಿಯ ಕೆಎಎಸ್ ಅಧಿಕಾರಿಯಾಗಿ ಜೆಸ್ಕಾಂ ವ್ಯವಸ್ಥಾಪಕರು, ಕೆಕೆ ಆರ್‌ಡಿಬಿ ಉಪ ಕಾರ್ಯದರ್ಶಿ ಜಿಮ್ಸ್ ಆಡಳಿತ ಅಧಿಕಾರಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿ ಅನುಭವ ಹೊಂದಿದ ಪ್ರಮೀಳಾ ಅವರು ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಗಳಿಸಿದವರು. ಇವರ ಸೇವೆಯಿಂದ ಕಲಬುರಗಿ ಮಹಾನಗರ ಪಾಲಿಕೆಗೆ ಕೀರ್ತಿ ಬರಲಿ ಎಂದು ಈ ಸಂದರ್ಭದಲ್ಲಿ ನರಸಿಂಹ ಮೆಂಡನ್ ಶುಭ ಹಾರೈಸಿದರು. ಹೋಟೆಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಮಹಾಕೀರ್ತಿ ಶೆಟ್ಟಿ ಹಾಗೂ ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top