ಕೇೂಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಂಸತ್ತು ಉದ್ಘಾಟನೆ

Chandrashekhara Kulamarva
0


ಉಡುಪಿ: "ಯುವ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮಾದರಿ ಸಂಸದೀಯ ಕಾರ್ಯ  ನಡವಳಿಕೆಯನ್ನು ಪ್ರಾಯೇೂಗಿಕವಾಗಿ ನಡೆಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದು ಇಂದಿನ ಅಗತ್ಯವೂ ಹೌದು. ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಗುಣ ಬೆಳೆಸುವುದು ಶಿಕ್ಷಣದ ಮೂಲ ಉದ್ದೇಶ. ನಾಯಕತ್ವ ಪ್ರಮುಖ ಗುಣಗಳಾದ ನಮ್ರತೆ, ಸ್ವಷ್ಟತೆ, ಧೈರ್ಯ, ನಿರ್ಧಾರ ಮುಂತಾದ ಸಾರ್ಮರ್ಥ್ಯವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕು" ಎಂದು ರಾಜಕೀಯ ವಿಶ್ಲೇಷಕ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಎಂಜಿಎಂ ಕಾಲೇಜು ಉಡುಪಿ ಇವರು ಹೇಳಿದರು.


ಕೇೂಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ ಮಾತನಾಡಿದರು.


ಸಭಾಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯಸ್ಥೆ ಪ್ರೀತಿ ರೇಖಾ ವಹಿಸಿ ಪ್ರತಿಜ್ಞಾ ವಿಧಿ ಬೇೂಧಿಸಿದರು. ಶಾಲಾ ಸಂಸತ್ತು ಸದನದ ಸಭಾಪತಿ ಕು.ಸಮೃದ್ಧಿ, ಉಪ ಸಭಾಪತಿ ಕು.ಪ್ರಗತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಅಭಿಷೇಕ ಸ್ವಾಗತಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top