ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Chandrashekhara Kulamarva
0


ಮಂಗಳೂರು: ಕಣಚೂರಿನಲ್ಲಿರುವ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು (ಜೂ.21) ದೀಪ ಬೆಳಗಿಸಿ ಉದ್ಘಾಟಿಸಲಾಯಿತು.


ಯೋಗಾಚಾರ್ಯ ವಿ. ಎಲ್ ರೇಗೋ ಅವರು ಮುಖ್ಯ ಅತಿಥಿಯಾಗಿದ್ದು ಯೋಗದಿಂದ ಬಹುಮುಖ ಲಾಭವಿದೆ. ಅಂತಾರಾಷ್ಠ್ರೀಯ ಮನ್ನಣೆ ಪಡೆದುದು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದರು.


ಮುಖ್ಯ ಭಾಷಣಕಾರರಾಗಿದ್ದ ಸಂಸ್ಥೆಯ ವೈದ್ಯಕೀಯ ಸಲಹೆಗಾರ ಮೂಲವ್ಯಾಧಿ ತಜ್ಞ ಡಾ ಸುರೇಶ ನೆಗಳಗುಳಿಯವರು ಶ್ರಮ‌ರಹಿತ ವ್ಯಾಯಾಮವಾಗಿರುವ ಯೋಗವು ಆಧ್ಯಾತ್ಮಿಕ ಸಮತೋಲನ‌ ಉಂಟುಮಾಡುತ್ತದೆ ಮತ್ತು ಇದು ವ್ಯಾಯಾಮಕ್ಕಿಂತ ಭಿನ್ನವಾಗಿದೆ ಎನ್ನುತ್ತಾ ಸ್ವರಚಿತ ಯೋಗದ ಬಗೆಗಿನ ಗಜಲ್ ವಾಚಿಸಿದರು.


ಕಣಚೂರು ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ ಶೆಹೆನ್ವಾಜ್ ಅವರು ಕಾಯಿಲೆಗಳ ನಿವಾರಣೆಗಳಿಗೆ ಕೇವಲ ಔಷಧಿಗಳು ಬೀರುವ ಪರಿಣಾಮಕ್ಕಿಂತ ಹೆಚ್ಚು ಯೋಗದಿಂದ ವೇಗೋತ್ಕರ್ಷವಾಗಬಹುದು ಎಂದರು.


ಸಂಸ್ಥೆಯ ಚೇರ್ಮನ್ ಡಾ|| ಹಾಜಿ  ಕಣಚೂರು ಮೋನು ಅವರು ಅಧ್ಯಕ್ಷ ಪೀಠದಿಂದ ಮಾತನಾಡುತ್ತಾ ಇತರೇತರ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದು ಇಂದಿನ‌ ಯೋಗ ದಿನಾಚರಣೆಯಲ್ಲಿ ಆ ಎಲ್ಲಾ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸುವುದು ಉತ್ತಮ‌ ಬೆಳವಣಿಗೆ ಎಂದರು.


ಆಯುರ್ವೇದ ಪ್ರಾಚಾರ್ಯೆ ಡಾ.ವಿದ್ಯಾಪ್ರಭಾ ಅವರು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತ ಭಾಷಣವನ್ನು ಮಾಡಿದರು. ಮುಖ್ಯ ಅಧೀಕ್ಷಕ ಡಾ ಕಾರ್ತಿಕೇಯ ಪ್ರಸಾದ್ ಧನ್ಯವಾದ ಸಮರ್ಪಣೆ ಮಾಡಿದರು.


ಡಾ ರಾಜೇಶ್ ಚಂದ್ರನ್, ಡಾ ಭವ್ಯಾ ಬಿ ಎಸ್, ಡಾ ಸೌಮ್ಯಾ ಕುಮಾರಿ ಸಂಯೋಜನೆ ಹಾಗೂ ನಿರೂಪಣೆ ಹಾಗೂ ರಮ್ಯಾ ಎಂ‌ ಅವರಿಂದ ನಡೆದ ಯೋಗಾಸನ ಪ್ರಾತ್ಯಕ್ಷಿಕೆಯಲ್ಲಿ ಮುನ್ನೂರು ಮಂದಿ ಭಾಗವಹಿಸಿದ್ದರು.


إرسال تعليق

0 تعليقات
إرسال تعليق (0)
To Top