ಇಮ್ಯುನಿಟಿ ಉತ್ಪನ್ನಶ್ರೇಣಿ ಬಿಡುಗಡೆ

Upayuktha
0


ಮಂಗಳೂರು: ಬೆಳೆಯುತ್ತಿರುವ ಜೀವನಶೈಲಿ ರೋಗಗಳು ಮತ್ತು ಆರೋಗ್ಯ ಜಾಗೃತಿಯೊಂದಿಗೆ, ಗ್ರಾಹಕರ ಬೆಳೆಯುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ, ಆಮ್ವೇ ಇಂಡಿಯಾ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ನ್ಯೂಟ್ರಿಲೈಟ್ ಟ್ರಿಪಲ್ ಪ್ರೊಟೆಕ್ಟ್ ಪರಿಚಯಿಸಿದೆ.


ಅಸೆರೋಲಾ ಚೆರ್ರಿ, ಅರಿಶಿನ ಮತ್ತು ಲೈಕೋರೈಸ್‍ನ ನೈಸರ್ಗಿಕ ತತ್ವಗಳನ್ನು ಒಳಗೊಂಡ ಒಂದು ವೈಜ್ಞಾನಿಕವಾಗಿ ಸಿದ್ಧಪಡಿಸಿದ, ಸಸ್ಯ-ಆಧಾರಿತ ಪೂರಕ ಇದಾಗಿದೆ. ಈ ಪ್ರೋಟೀನ್ ಸೂತ್ರೀಕರಣವು ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ಜತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಉದರ, ಚರ್ಮ ಹಾಗೂ ರೋಗನಿರೋಧಕ ಆರೋಗ್ಯಕ್ಕೆ ಬಲವಾದ ಆಂಟಿಆಕ್ಸಿಡೆಂಟ್ ರಕ್ಷಣೆಯನ್ನು ಸಹ ಒದಗಿಸುವ ತ್ರಿವಳಿ ಲಾಭ ನೀಡುತ್ತದೆ ಎಂದು ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಚೋಪ್ರಾ ಹೇಳಿದ್ದಾರೆ.


ನ್ಯೂಟ್ರಿಲೈಟ್ ಟ್ರಿಪಲ್ ಪೆÇ್ರಟೆಕ್ಟ್ ಸುಸ್ಥಿರ, ಸಸ್ಯ-ಆಧಾರಿತ ಮತ್ತು ಪುರಾವೆ ಹೊಂದಿದ ಪೆÇೀಷಣೆಯ ತತ್ವವನ್ನು ಒಳಗೊಂಡಿದೆ. ಪ್ರತಿ ಬಾರಿಯ ಸೇವನೆಯು ವಿಟಮಿನ್ ಸಿ ಅಂಶದ ದಿನನಿತ್ಯದ ಶಿಫಾರಸ್ಸು ಮಾಡಿದ ಪ್ರಮಾಣವನ್ನು ಒದಗಿಸಿ, ರೋಗನಿರೋಧಕ ಜೀವನವನ್ನು ಖಾತರಿಪಡಿಸುತ್ತದೆ. ಈ ಸೂತ್ರೀಕರಣವು ಬ್ರೆಜಿಲ್ ನ ಉಬಾಜಾರದಿಂದ ಪ್ರಮಾಣೀಕೃತ ಸಾವಯವ ಹೊಲಗಳಿಂದ ಪಡೆದುಕೊಳ್ಳಲಾದ ಅಸೆರೋಲಾ ಚೆರ್ರಿ ಸಾರ ನೆಲ್ಲಿಕಾಯಿಗಿಂತಲೂ ಸುಮಾರು ಏಳು ಪಟ್ಟು ಹೆಚ್ಚಿನ ವಿಟಮಿನ್ ಸಿ ಅನ್ನು ಹೊಂದಿದೆ. ಇದಲ್ಲದೆ, ಇದು 40 ಮಿಗ್ರಾಂ ಅರಿಶಿನ ಸಾರ (50 ಪಟ್ಟು ಕಚ್ಚಾ ಅರಿಶಿನಕ್ಕೆ ಸಮ) ಮತ್ತು 167 ಮಿಗ್ರಾಂ ಲೈಕೋರೈಸ್ ಸಾರವನ್ನು (ಆರು ಪಟ್ಟು ಕಚ್ಚಾ ಲೈಕೋರೈಸ್‍ಗೆ ಸಮ) ಒಳಗೊಂಡಿದೆ ಎಂದು ಆಮ್ವೇ ಇಂಡಿಯಾದ ಪ್ರಮುಖ ಮಾರ್ಕೆಟಿಂಗ್ ಅಧಿಕಾರಿಯಾದ ಅಮೃತಾ ಅಸ್ರಾಣಿ ವಿವರಿಸಿದ್ದಾರೆ.


ಎರಡನ್ನೂ ಪ್ರಮಾಣೀಕೃತ ಸಾವಯವ ಕೃಷಿಭೂಮಿಗಳಿಂದ ಪಡೆಯಲಾಗಿದ್ದು, ಇದು ಅದರ ಪ್ರಬಲ ಉರಿಯೂತ ನಿವಾರಕ ಮತ್ತು ಆಂಟಿ-ಆಕ್ಸಿಡೆಂಟ್ ನಿರೋಧಕ ಲಾಭಗಳನ್ನು ನೀಡುತ್ತದೆ. ಕೃತಕ ಬಣ್ಣಗಳು, ಸುವಾಸನೆಗಳು ಅಥವಾ ಸಂರಕ್ಷಕಗಳಿಲ್ಲದೆ ತಯಾರಿಸಿದ ಈ ಉತ್ಪನ್ನವು ಅತ್ಯುತ್ತಮ ಸಂಯೋಜಿತ ಸೂತ್ರೀಕರಣ ಹೊಂದಿದ್ದು, ರೋಗನಿರೋಧಕ ಶಕ್ತಿ, ಉದರ ಮತ್ತು ಚರ್ಮದ ಆರೋಗ್ಯವನ್ನು ಬೆಂಬಲಿಸುವ ಅಂಶಗಳನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top