ಬೆಂಗಳೂರು: ಹಲವಾರು ಕಾರಣಗಳಿಂದ ಜಾಗತಿಕ ಉದ್ಯಮ ಕ್ಷೇತ್ರ ಬದಲಾಗುತ್ತಿದ್ದು, ಪ್ರತಿಕ್ರಿಯಾಶೀಲ ಮತ್ತು ಪ್ರಾಯೋಗಿಕ ಮ್ಯಾನೇಜ್ಮೆಂಟ್ ಶಿಕ್ಷಣ ಒದಗಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಜಾಸ್ತಿಯಾಗಿದೆ. ಈ ನಿಟ್ಟಿನಲ್ಲಿ ಐಎಸ್ಎಂಇ ಸಂಸ್ಥೆಯು ಬೋರ್ಡ್ ಆಫ್ ಸ್ಟಡೀಸ್ ಸಭೆಯನ್ನು ಆಯೋಜಿಸಿದ್ದು, ಈ ಸಭೆಯಲ್ಲಿ ಆಕ್ಸೆಂಚರ್, ಜೆಪಿ ಮೋರ್ಗನ್ & ಚೇಸ್, ಗ್ರಾಂಟ್ ಥಾರ್ನ್ ಟನ್, ಸೇಲ್ಸ್ ಫೋರ್ಸ್.ಕಾಮ್, ಇನ್ಫೋಸಿಸ್, ಟಿಸಿಎಸ್, ಎಲ್&ಟಿ, ಏಸರ್ ಮತ್ತು ರಿಲಯನ್ಸ್ ರೀಟೇಲ್ ನಂತಹ ಪ್ರಮುಖ ಸಂಸ್ಥೆಗಳ 30ಕ್ಕೂ ಹೆಚ್ಚು ಹಿರಿಯ ಉದ್ಯಮ ತಜ್ಞರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಿ ಪಿಜಿಡಿಎಂ ಪಠ್ಯಕ್ರಮವನ್ನು ಈ ಕಾಲಕ್ಕೆ ಮತ್ತು ಉದ್ಯಮದ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ರೂಪಿಸುವ ಕುರಿತು ಸಂವಾದ ನಡೆಸಿದರು.
ಐಎಸ್ಎಂಇನ ಬೋರ್ಡ್ ಆಫ್ ಸ್ಟಡೀಸ್ ಸಭೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾರಾಟ ಕೌಶಲ್ಯ, ಎಐನಂತಹ ಡೇಟಾ ಆಧಾರಿತ ತಂತ್ರಜ್ಞಾನಗಳು ಮತ್ತು ಮಾನವ ಕೇಂದ್ರಿತ ನಾಯಕತ್ವದಂತಹ ಪ್ರಾಯೋಗಿಕ ಕೌಶಲ್ಯಗಳನ್ನು ಸಂಯೋಜಿಸುವ ಕುರಿತು ಚರ್ಚಿಸಲಾಯಿತು. ಮಾರ್ಕೆಟಿಂಗ್ ಮತ್ತು ಮಾರಾಟದ ಮೂಲಭೂತ ಸಿದ್ಧಾಂತಗಳನ್ನು ಮರುವ್ಯಾಖ್ಯಾನಿಸುವುದರಿಂದ ಹಿಡಿದು ಎಐ ಆಧರಿತ ಡಿಸಿಷನ್ ಮೇಕಿಂಗ್ ಅನ್ನು ವಿವಿಧ ಕ್ಷೇತ್ರಗಳಲ್ಲಿ ಸಂಯೋಜಿಸುವವರೆಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಶಿಕ್ಷಣವು ವಿದ್ಯಾರ್ಥಿಗಳನ್ನು ಕೇವಲ ಅವರ ಉದ್ಯೋಗಕ್ಕೆ ಹೊಂದಿಕೊಳ್ಳಲು ಸಜ್ಜುಗೊಳಿಸಲು ನೆರವಾಗುವುದರ ಬದಲಾಗಿ ಹೊಸ ಕಾಲಕ್ಕೆ ಸಿದ್ಧಗೊಳಿಸಬೇಕಾದ ಅಗತ್ಯವನ್ನು ಸಾರಲಾಯಿತು.
ಈ ಕುರಿತು ಮಾತನಾಡಿರುವ ಐಎಸ್ಎಂಇಯ ನಿರ್ದೇಶಕ ಡಾ. ನಿತಿನ್ ಗಾರ್ಗ್ ಅವರು, “ಮಾರಾಟ ಸಿದ್ಧತೆ, ರಿಯಲ್ ಟೈಮ್ ಡೇಟಾ ಬಳಕೆ, ನೀತಿಶಾಸ್ತ್ರ ಇತ್ಯಾದಿ ಕುರಿತು ನಾವು ಸಂವಾದ ನಡೆಸಿದ್ದೇವೆ. ಬೋರ್ಡ್ ಆಫ್ ಸ್ಟಡೀಸ್ ಸಭೆಯಲ್ಲಿ ದೊರೆತಿರುವ ಒಳನೋಟಗಳು ನಮ್ಮ ಗಮನವನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ಮತ್ತು ಪ್ರಸ್ತುತ ಹಾಗೂ ಭವಿಷ್ಯಕ್ಕೆ ಸಲ್ಲುವ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ,” ಎಂದು ಹೇಳಿದರು.
ಐಎಸ್ಎಂಇಯ ಡೀನ್ ಡಾ. ರೋನಿ ಕುರಿಯನ್ ಅವರು, “ಚರ್ಚೆಯಲ್ಲಿ ಹೊರಹೊಮ್ಮಿದ ವಿಚಾರಗಳು ಭವಿಷ್ಯ ಸಿದ್ಧ ವೃತ್ತಿಪರರನ್ನು ರೂಪಿಸುವ ಐಎಸ್ಎಂಇನ ಬದ್ಧತೆಗೆ ನೆರವಾಗಲಿದೆ. ಬೋರ್ಡ್ ಆಫ್ ಸ್ಟಡೀಸ್ ಸಭೆಯ ಚರ್ಚೆಗಳು ಬದಲಾಗುತ್ತಿರುವ ಉದ್ಯಮ ಕ್ಷೇತ್ರಕ್ಕೆ ಹೊಂದಿಕೊಳ್ಳುವ ವಿದ್ಯಾರ್ಥಿಗಳನ್ನು ಒದಗಿಸಲು ನಮಗೆ ಮೌಲ್ಯಯುತ ಮಾರ್ಗದರ್ಶನವನ್ನು ನೀಡಿವೆ,” ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ