ಯಕ್ಷಗುರು ರಕ್ಷಿತ್ ಪಡ್ರೆಗೆ ಸಾಧಕ ಸನ್ಮಾನ

Upayuktha
0

ಮಂಗಳೂರು: "ಯಕ್ಷಗಾನವನ್ನು ಇಂದು ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಶಾಲೆ- ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಅದರಲ್ಲೂ ಯಕ್ಷ ಶಿಕ್ಷಕರಾಗಿ, ಅನೇಕ ತಂಡಗಳಿಗೆ ಯಕ್ಷಗುರುವಾಗಿ, ಹನುಮಗಿರಿ ಮೇಳದ ಸ್ತೀ- ಪುರುಷ ಪಾತ್ರಗಳ ಕಲಾವಿದರಾಗಿ ಖ್ಯಾತರಾದ ರಕ್ಷಿತ್ ರವರು ಉಭಯತಿಟ್ಟುಗಳ ಕಲಾವಿದರೂ ಹೌದು. ಇವರನ್ನು ಸರಯೂ ಸಂಸ್ಥೆ ಗೌರವಿಸುತ್ತಿರುವುದು ಸಕಾಲಿಕವಾಗಿದೆ. ಅವರು ಇನ್ನೂ ಚೆನ್ನಾಗಿ ಸಾಧನೆ ಮಾಡಲಿ" ಎಂದು ಕದ್ರಿ ಶ್ರೀ ಮಂಜುನಾಥ ದೇವಳದ ಟ್ರಸ್ಟಿ ಉಷಾ ಪ್ರಭಾಕರ್ ರವರು ಯಕ್ಷ ಪಕ್ಷ- ರಜತ ಸಂಭ್ರಮದಲ್ಲಿ ಹೇಳಿದರು.



ರಕ್ಷಿತ್ ರವರು "ಯಕ್ಷಗಾನ ತನಗೆ ಅನೇಕ ಆಯಾಮವನ್ನು ಕಲ್ಪಿಸಿದೆ. ಕಲಿಯುತ್ತಾ ಕಲಿಸುತ್ತಾ ಸಾಗುತ್ತಿದ್ದೇನೆ. ಎಲ್ಲರ ಅನುಗ್ರಹ ತನ್ನ ಮೇಲಿರಲಿ" ಎಂದರು.


ರಮ್ಯಾ ರಾಜ್ ಸನ್ಮಾನ ಪತ್ರ ವಾಚಿಸಿದರು. ಸುಧಾಕರ ರಾವ್ ನಿರ್ವಹಿಸಿದರು. ಮಯೂರ ಪ್ರತಿಷ್ಠಾನದ ಉಮೇಶ್ ಆಚಾರ್ಯ, ಶೋಭಾ ಪೇಜಾವರ್, ಗೌತಂ ಭಂಡಾರಿ, ಅಕ್ಷಯ, ಮಧುಸೂದನ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top