ದಾವಣಗೆರೆ: ಕರ್ನಾಟಕ ಕರಾವಳಿ ಜಿಲ್ಲೆಗಳ ಆರಾಧನಾ ಕಲೆ ಯಕ್ಷಗಾನ ಪರಂಫರೆ ಅಪ್ಪಟ ಕನ್ನಡ ಭಾಷೆಯ ಐತಿಹಾಸಿಕ ದಾಖಲೆ. ವಾಣಿಜ್ಯ ನಗರ ದಾವಣಗೆರೆಗೆ ಈ ಸಾಂಪ್ರಾದಾಯಕ ದೇವರ ಪೂಜೆಯ ಯಕ್ಷಗಾನ ಪೌರಾಣಿಕ ಕಲೆಯನ್ನು ಐದು ದಶಕಗಳಿಂದ ಪರಿಚಯಿಸಿದ್ದು ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಾಧನೆ ಶ್ಲಾಘನೀಯ ಎಂದು ದೂಡಾ ಅಧ್ಯಕ್ಷರು ಯಕ್ಷಗಾನ ಪ್ರೇಮಿ ದಿನೇಶ್ ಕೆ.ಶೆಟ್ಟಿ ಯಕ್ಷಗಾನ ಪ್ರದಶನದ ಚಂಡೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಿವಾನಿ ಗ್ರೂಪ್ಸ್ ಆಫ್ ಹೋಟೆಲ್ ಮತ್ತು ಸವಿಡೈನ್ ಗ್ರೂಪ್ ಆಫ್ ಹೋಟೆಲ್ ದಾವಣಗೆರೆ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಹಟ್ಟಿಯಂಗಡಿಯ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶಶಿಪ್ರಭಾ ಪರಿಣಯ” ಪೌರಾಣಿಕ ಯಕ್ಷಗಾನ ಕಥಾನಕದ ಯಕ್ಷಗಾನ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷರಂಗ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿಯವರು ವಹಿಸಿಕೊಂಡಿದ್ದರು.
ದಾವಣಗೆರೆಯ ವಿದ್ಯಾನಗರ ರಸ್ತೆಯ ದೃಶ್ಯ ಕಲಾ ಮಹಾವಿದ್ಯಾಲಯದ ಒಳಾಂಗಣದ ರಂಗ ಮಂದಿರದದಲ್ಲಿ ನಡೆದ ಈ ಯಕ್ಷರಂಗದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೈರಾಜ್, ಮಾಜಿ ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್, ಶ್ರೀನಿವಾಸ್ ದಾಸಕರಿಯಪ್ಪ, ಹಟ್ಟಿಯಂಗಡಿ ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ರಂಜಿತ್‌ಕುಮಾರ್, ರಂಗಸ್ವಾಮಿ, ಕಲಾಕುಂಚ ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಮಹೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಮಹಾಗಣಪತಿ ಪೂಜೆಯೊಂದಿಗೆ ಭಾಗವತರಾದ ಸುಧಾಕರ ಕೊಠಾರಿಯವರು ವಿಘ್ನೇಶ್ವರ ಶ್ಲೋಕದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಯಕ್ಷರಂಗದ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್‌ಕುಮಾರ್ ಶೆಟ್ಟಿಯವರು ಅಚ್ಚುಕಟ್ಟಾಗಿ ನಿರೂಪಿಸಿ, ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ