ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೊಂದು ಉತ್ತಮ ಪೀಠಿಕೆ

Upayuktha
0

ಪ್ಲಾಸ್ಟಿಕ್ ಭೂತ ನಮ್ಮೆದುರು ದಿನೇ ದಿನೇ ಬೆಳೆಯುತ್ತಿದೆ. ಪ್ಲಾಸ್ಟಿಕ್ ಎಂಬುದು ಸಾವಯವವಲ್ಲ. ಅದು ನಮ್ಮ 'ಸ್ವ'ತ್ವವೂ ಅಲ್ಲ.ಪ್ಲಾಸ್ಟಿಕ್ ಮುಕ್ತ ಆಗೋದು ಎಲ್ಲರೂ ಕಾಣುವ ಕನಸೇ, ಆದರೆ ಆ ದಿಶೆಯಲ್ಲಿ ನಮ್ಮ ಪ್ರಯತ್ನ ಎಷ್ಟಿದೆ?


ಸ್ವತ್ವದ ಅಧಿವೇಶನದಲ್ಲಿ ಒಂದು ವಿಶೇಷ ತಂಡವಿತ್ತು. ಬಾಳೆ ಎಲೆ ಊಟ ಶುದ್ಧ ದೇಸಿ. ಅಧಿವೇಶನದಲ್ಲಿ ಬಾಳೆ ಎಲೆ ಊಟವಿತ್ತು, ಈ ತಂಡ ಹೊಳೆಯುವ ತಟ್ಟೆ ಲೋಟಗಳೊಂದಿಗೆ ಬಂದಿದ್ದರು. ಕೊಪ್ಪದ ಅಶೋಕ ಮತ್ತು ಅಂತಹ ಹತ್ತು ಕಾರ್ಯಕರ್ತರು ಇಂತಹದೊಂದು ಸಂಕ್ರಾಂತಿ ಮಾಡಿದ್ದಾರೆ.


ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತಮ್ಮ ತಟ್ಟೆ ಲೋಟ ಒಯ್ಯುವುದು. ನೀರು ಕಾಫಿ, ಊಟ ತಿಂಡಿ ಅದರಲ್ಲಿಯೇ. ತೊಳೆದು ಒರೆಸಿ ಮತ್ತೆ ಚೀಲಕ್ಕೆ ಹಾಕಿಕೊಳ್ಳುವುದು. ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಇವರು ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಾವೆಲ್ಲರೂ ಅವರೊಟ್ಟಿಗೆ ಹೆಜ್ಜೆ ಹಾಕೋಣ.


- ಅರವಿಂದ ಸಿಗದಾಳ್, ಮೇಲುಕೊಪ್ಪ


إرسال تعليق

0 تعليقات
إرسال تعليق (0)
To Top