ಸನಾತನ ಸಂಸ್ಥೆಯ ಸಂಸ್ಥಾಪಕ ಡಾ. ಜಯಂತ ಆಠವಲೆ 83 ನೇ ಜನ್ಮೋತ್ಸವ ಮೇ 17 ರಿಂದ

Upayuktha
0



ಬೆಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ 83 ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವದ ಸಂದರ್ಭದಲ್ಲಿ 'ವಿಶ್ವಕಲ್ಯಾಣಕ್ಕಾಗಿ ರಾಮರಾಜ್ಯದ ಸಮಾನ `ಸನಾತನ ರಾಷ್ಟ್ರದ ಶಂಖನಾದ ಮೊಳಗಿಸಲು ಗೋವಾದಲ್ಲಿ ಮೇ 17 ರಿಂದ 19, 2025 ವರೆಗಿನ ಸಮಯದಲ್ಲಿ ಐತಿಹಾಸಿಕ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದ ಆಯೋಜನೆ ಮಾಡಲಾಗಿದೆ. 

ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ಸಮರ್ಪಿಸಿಕೊಂಡಿರುವ ಸಂತರು, ಮಹಂತರು, ಹಿಂದುತ್ವರಕ್ಷಕರು, ವಿಚಾರವಂತರು, ಕೇಂದ್ರ ಸಚಿವರು, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ 25 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು, ಧರ್ಮಪ್ರೇಮಿ ಹಿಂದೂಗಳ ಉಪಸ್ಥಿತಿ ಇದು ಈ ಮಹೋತ್ಸವದ ವೈಶಿಷ್ಟ್ಯವಾಗಿದೆ.  ಕರ್ನಾಟಕದಿಂದ 5 ಸಾವಿರಕ್ಕೂ ಹೆಚ್ಚಿನ ಸಾಧಕರು, ಧರ್ಮಪ್ರೇಮಿ ಹಿಂದೂಗಳು ಉಪಸ್ಥಿತರಿರುವರು ಎಂದು ಸನಾತನ ಸಂಸ್ಥೆಯ ಸೌ. ಶಾರದಾ ಯೋಗಿಶ್  ಮಾಹಿತಿ ನೀಡಿದ್ದಾರೆ. 

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ರಾಜ್ಯಧ್ಯಕ್ಷರಾದ . ಎನ್ ಜಯರಾಮ, ಹಿಂದೂ ನಾಯಕರಾದ ಎಮ್ ಎಲ್ ಶಿವಕುಮಾರ್, ಅಡ್ವೋಕೇಟ್ ಶಕುಂತಲಾ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ  ಮೋಹನ ಗೌಡ ಉಪಸ್ಥಿತರಿದ್ದರು.

ಈ ಮಹೋತ್ಸವಕ್ಕೆ, 'ಆರ್ಟ್ ಆಫ್ ಲಿವಿಂಗ್'ನ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರಜಿ, ಪತಂಜಲಿ ಯೋಗ ಪೀಠದ ಸಂಸ್ಥಾಪಕ ಪ. ಪೂ. ಯೋಗಋಷಿ ಸ್ವಾಮಿ ರಾಮದೇವಜಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷ ಪ. ಪೂ. ಸ್ವಾಮಿ ಗೋವಿಂದದೇವ ಗಿರಿಜಿ, ಕೇಂದ್ರ ವಿದ್ಯುತ್ ರಾಜ್ಯ ಸಚಿವ ಶ್ರೀಪಾದ ನಾಯಿಕ, ಉತ್ತರಪ್ರದೇಶದ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಶ್ರೀದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ  ಏಕನಾಥ ಶಿಂಧೆ, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಛತ್ತೀಸ್ಗಡದ ಮುಖ್ಯಮಂತ್ರಿ ವಿಷ್ಣುದೇವ ಸಾಯ, ತೆಲಂಗಾಣದ ಭಾಜಪದ ಶಾಸಕ ಟಿ. ರಾಜಾ ಸಿಂಗ್, ಹಾಗೂ ಕಾಶಿ ಮತ್ತು ಮಥುರಾದ ಪ್ರಕರಣ ನಡೆಸುತ್ತಿರುವ ನ್ಯಾಯವಾದಿ ವಿಷ್ಣುಶಂಕರ ಜೈನ್ ಸೇರಿದಂತೆ 1000 ಕ್ಕೂ ಅಧಿಕ ಗಣ್ಯರನ್ನು ಆಮಂತ್ರಿಸಲಾಗಿದೆ.

ಕರ್ನಾಟಕದಿಂದ  ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ , ಮೈಸೂರು ಸಂಸದರಾದ ಯದುವೀರ ಶ್ರೀಕೃಷ್ಣದತ್ತ ಒಡೆಯರ್, ಯುವ ಬ್ರಿಗೇಡ್ ಸಂಸ್ಥಾಪಕ. ಚಕ್ರವರ್ತಿ ಸುಲಿಬೆಲೆ, ನ್ಯಾಯವಾದಿ ಪ್ರಮಿಳಾ ನೇಸರ್ಗಿ, ಹಿರಿಯ ವಕೀಲರಾದ ಅರುಣ ಶ್ಯಾಮ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಲಿದ್ದಾರೆ.

"ಸನಾತನ ರಾಷ್ಟ್ರ ಶಂಖನಾದ ಉತ್ಸವದ" ಪ್ರಮುಖ ಆಕರ್ಷಣೆಯೊಂದೆಂದರೆ 1000 ವರ್ಷಗಳ ಹಿಂದಿನ ಪವಿತ್ರ ಸೋಮನಾಥ ಜ್ಯೋತಿರ್ಲಿಂಗವನ್ನು ನೋಡುವ ಅಪರೂಪದ ಅವಕಾಶವಾಗಿದೆ. ಈ ಜ್ಯೋತಿರ್ಲಿಂಗವನ್ನು ಮೇ 17 ರಿಂದ 19 ರವರೆಗೆ ಉತ್ಸವ ಸ್ಥಳದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top