ಸಾಧಿಸುವ ಹಂಬಲ ಇರುವವರು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು

Upayuktha
0



ಪುತ್ತೂರು: ಸಾಮಾಜಿಕ ಜಾಲತಾಣಗಳು ಜನರ ಗಮನವನ್ನು ಬೇಗನೆ ಸೆಳೆಯುತ್ತವೆ. ಜೊತೆಗೆ ಏಕಾಗ್ರತೆಯನ್ನೂ ಕಡಿಮೆಗೊಳಿಸುತ್ತವೆ. ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲ ಇರುವ ಮಂದಿ, ಸಾಮಾಜಿಕ ಜಾಲತಾಣಗಳಿಂದ ದೂರವಿರ ಬೇಕು.ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಭಿನ್ನವಾದ, ಉತ್ತಮ ರೀತಿಯ ಕೌಶಲ್ಯವಿರುತ್ತದೆ. ಅದನ್ನು ಒಲಿಸಿಕೊಳ್ಳುವ ಮಾರ್ಗ ವನ್ನು ಹುಡುಕಿಕೊಳ್ಳಬೇಕು ಎಂದು ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆ. ಎಂ. ಎಫ್. ಸಿ ನ್ಯಾಯಾಧೀಶ  ಶಿವಣ್ಣ ಹೆಚ್. ಆರ್  ಹೇಳಿದರು.


ಪುತ್ತೂರಿನ ವಿವೇಕಾನಂದ ಕಾಲೇಜಿನ ಕಲಾ ವಿಭಾಗ,ಮಾನವಿಕ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಜರುಗಿದ  ದಿನದ ಅಂತರ್ ವಿಭಾಗ ಮಟ್ಟದ ಕಲಾಸಪ್ತ 2025  ಕೌಶಲ್ಯ ವರ್ಧನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಭಾರತದ ಜನರು, ಕುಟುಂಬ ಜೀವನವನ್ನು ನಿರ್ವಹಿಸುವಷ್ಟು ಸೊಗಸಾಗಿ ಸಾರ್ವಜನಿಕ ಬದುಕನ್ನು ನಿರ್ವಹಿಸುತ್ತಿಲ್ಲ.ಹಾಗಾಗಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ನಡವಳಿಕೆಗಳನ್ನು  ತಿಳಿಸುವ ಪ್ರಯತ್ನ ಕಾಲೇಜಿನ ವಿಭಾಗಗಳಿಂದ ನಡೆಯಬೇಕು ಎಂದರು.


ಪ್ರಕೃತಿಯನ್ನು ನಾವು ಆರಾಧಿಸಬೇಕು. ದೈವ ದೇವರುಗಳ ಮೇಲೆ ನಂಬಿಕೆ ಬೇಕು. ನಮ್ಮ ಪ್ರಯತ್ನವೂ ಇದ್ದಾಗ ನಂಬಿದ ದೈವಿಕ ಶಕ್ತಿಯೂ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಮುಖ್ಯ. ಗುರಿಯನ್ನು ತಲುಪಲು ಸಹಕರಿಸುವ ಗುರುವನ್ನು ಎಂದೂ ಮರೆಯ ಕೂಡದು. ನಾವು ಮಾಡುವ ಕೆಲಸ ಶ್ರದ್ಧೆಯಿಂದ ಕೂಡಿರಲಿ ಎಂದು ಜೀವ ರಕ್ಷಕ, ಸಮಾಜ ಸೇವಕ ಈಶ್ವರ ಮಲ್ಪೆ  ಸಮಾರೋಪದ ನುಡಿಗಳನ್ನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್  ಬದುಕು ಏನೆಂಬುದನ್ನು ಈಶ್ವರ ಮಲ್ಪೆಯವರಂತವರ ಜೀವನದಿಂದ  ಅರಿಯಬಹುದು. ನಿಸ್ವಾರ್ಥವಾದ ಸಮಾಜಸೇವೆ ಪದಗಳಿಗೆ ನಿಲುಕದ್ದು. ರಾಷ್ಟ್ರದ ಕಾರ್ಯಗಳಿಗೆ ನಮ್ಮ ಮೊದಲ ಪ್ರಾಶಸ್ತ್ಯ ಇರಬೇಕು  ಎಂದರು.


ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ  ಮಥುರಾ  ತಂಡ ಸಮಗ್ರ ಬಹುಮಾನ ಗಳಿಸಿಕೊಂಡಿತು. ಅಯೋಧ್ಯಾ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ವಿಶೇಷಾಧಿಕಾರಿ ಡಾ. ಶ್ರೀಧರ ನಾಯಕ್, ಕಲಾ ವಿಭಾಗದ ಡೀನ್ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ದುರ್ಗಾರತ್ನ, ಐಕ್ಯೂಎಸಿ ಘಟಕದ ಸಂಯೋಜಕಿ ಡಾ.ರವಿಕಲಾ, ಕಾರ್ಯಕ್ರಮದ ಸಂಯೋಜಕಿ ಡಾ. ವಿದ್ಯಾ ಎಸ್ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಸುಪ್ರೀತ್ ಅಮೈ, ವೈಷ್ಣವಿ ಶೆಟ್ಟಿ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ಕಾಲೇಜಿನ ಕಲಾವಿಭಾಗದ ಡೀನ್ ಹಾಗೂ ಹಿಂದಿ ವಿಭಾಗ ಮುಖ್ಯಸ್ಥೆ ಡಾ.ದುರ್ಗಾರತ್ನ ವಂದಿಸಿದರು, ಕಾರ್ಯಕ್ರಮವನ್ನು ತೃತೀಯ ವಿಭಾಗದ ವಿದ್ಯಾರ್ಥಿನಿ ಪ್ರಸಾದಿನಿ ತಿಂಗಳಾಡಿ ಹಾಗೂ ಲತಾ ಚೆಂಡೆಡ್ಕ ನಿರೂಪಿಸಿ, ಶ್ರೇಯಾ ಆಚಾರ್ಯ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top