ಸಂಗೀತ ನೃತ್ಯ ಏಕಕಾಲಕ್ಕೆ ಒಲಿಯುವುದು ಕಷ್ಟ: ಕೆ.ಚಂದ್ರಶೇಖರ ನಾವಡ

Upayuktha
0

ವಿದುಷಿ ಸಿಂಚನಲಕ್ಷ್ಮಿ ಕೋಡಂದೂರು ರಂಗಪ್ರವೇಶ




ಪೆರ್ನಾಜೆ: ಸಂಗೀತ ಹಾಗೂ ನೃತ್ಯ ಏಕಕಾಲಕ್ಕೆ ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ. ಆದರೆ ಸತತ ಪರಿಶ್ರಮದಿಂದ ನಾಟ್ಯವಿದ್ಯಾನಿಲಯದ ಶಿಷ್ಯೆ ಸಿಂಚನ ಅದೆಲ್ಲವನ್ನೂ ಮೀರಿದ ಸಾಧನೆಯನ್ನು ಮಾಡಿ ರಂಗಪ್ರವೇಶವನ್ನು ಮಾಡಿದ್ದಾಳೆ. ರಂಗಪ್ರವೇಶವು ನಿಂತ ನೀರಾಗದೆ ನಾದವು ನಿರಂತರ ಹರಿಯುತ್ತಿರಬೇಕು ಎಂದು ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಚಂದ್ರಶೇಖರ ನಾವಡ ಹೇಳಿದರು. 



ರಂಗಪ್ರವೇಶ ಎಂದರೆ ಪ್ರಾರಂಭವಷ್ಟೇ ಇದನ್ನು ಗ್ರಾಮೀಣ ಪ್ರದೇಶದಲ್ಲಿ ಸಿಟಿ ಪಟ್ಟಣದ ಕಾರ್ಯಕ್ರಮದಂತೆ ಅದ್ದೂರಿಯಾಗಿ ನಡೆದಿದ್ದು ಒಂದು ಸುಂದರ ಕುಸುಮವಾಗಿ ಅರಳಿದೆ ಇದೀಗ ರಂಗಪ್ರವೇಶ ಕಾರ್ಯಕ್ರಮಗಳು ವಿರಳವಾಗುತ್ತಿದ್ದು. ಅಲ್ಲೊಂದು ಇಲ್ಲೊಂದು ಅಷ್ಟೇ ಇತ್ತೀಚೆಗೆ ಜಾತ್ರೆ ಬ್ರಹ್ಮ ಕಳಸದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ಸೇವೆಗೆ ಸೀಮಿತವಾಗಿದೆ ಕಲೆಗೆ ಬೆಲೆ ಕಟ್ಟಲಾಗದು ಎನ್ನುವ ನಾವು ವೇದಿಕೆಯಲ್ಲಿ ವೇದಿಕೆಯಲ್ಲಿರುವ ಅತಿಥಿಗಳು ಎಲ್ಲಾ ಕಿಂಚಿತ್ತಾದರು ಪ್ರೋತ್ಸಾಹ ಕೊಡಿ ಎಂದರು. ತುಂಬಾ ತುಂಬಾ ಕೊಡಿ ಎಂದು ಕೇಳುವುದಿಲ್ಲ ಖರ್ಚಿನ ಭಾಗವನ್ನು ಅಷ್ಟೇ ಎಲ್ಲಾ ಕಲಾವಿದರು ಸೇವೆ ಎಂದು ಮಾಡಲು ಕಷ್ಟ ಸಾಧ್ಯ ಎಂದು ನಾವಡರು ತಿಳಿಸಿದರು.



ನಾಟ್ಯ ವಿದ್ಯಾನಿಲಯ ಕುಂಬಳೆ ಇದರ ನೃತ್ಯಗುರುಗಳಾದ ವಿದುಷಿ ಡಾ. ವಿದ್ಯಾಲಕ್ಷ್ಮಿ ಇವರ ಶಿಷ್ಯೆ ಕು| ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಇವರ ಭರತನಾಟ್ಯ ರಂಗಪ್ರವೇಶದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ವಿಟ್ಲ ಗಾರ್ಡನ್ ಆಡಿಟೋರಿಯಂನಲ್ಲಿ ಗುರುವಾರ ಜರಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಭರತನಾಟ್ಯವೆಂಬ ಕಲೆಯ ಮೂಲಕ ಅನೇಕ ಶಿಷ್ಯಂದಿರನ್ನು ಬೆಳಕಿಗೆ ತಂದ ಡಾ. ವಿದ್ಯಾ ಲಕ್ಷ್ಮಿ ಅವರು ಜನಮೆಚ್ಚುವ ಸಾಧನೆಯನ್ನು ಮಾಡಿದ್ದಾರೆ. ಸಿಂಚನ ಲಕ್ಷ್ಮಿ ಅನೇಕ ಪ್ರತಿಭೆಗಳನ್ನು ನೀಡಿ ಕಲೆಯ ಮೇಲಿನ ಪ್ರೀತಿಯನ್ನು ಅವರು ತೋರ್ಪಡಿಸಿದ್ದಾರೆ. ಎಂದರು. ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ ನೇತೃತ್ವದಲ್ಲಿ ವೇದಮೂರ್ತಿ ಮಹೇಶ್ ಪರಕ್ಕಜೆ ದೀಪಪ್ರಜ್ವಲನೆಗೈದು ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಸಿದ್ಧ ಮೃದಂಗವಾದಕ ವಿದ್ವಾನ್ ಡಾ. ವಿ.ಆರ್. ನಾರಾಯಣ್ ಪ್ರಕಾಶ್ ಕಲ್ಲಿಕೋಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್ ಪುತ್ತೂರು, ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ, ವಿಟ್ಲ ಅರಮನೆಯ ಕೆ.ಕೃಷ್ಣಯ್ಯ, ವಿಟ್ಲ ಶ್ರೀ ಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ. ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಸವಿತಾ ಕೋಡಂದೂರು ನೇತೃತ್ವ ವಹಿಸಿದ್ದರು. ಕುಂಬಳೆ ನಾಟ್ಯ ವಿದ್ಯಾನಿಲಯದ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಇವರಿಗೆ ಗುರುವಂದನೆ ನಡೆಯಿತು. ರಘುರಾಮ ಶಾಸ್ತ್ರಿ  ಕೋಡಂದೂರು ಸ್ವಾಗತಿಸಿದರು.  ಕುಮಾರ್ ಪೆರ್ನಾಜೆ  ವೇ.ಮೂ. ಗೋಪಾಲಕೃಷ್ಣ ಭಟ್, ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು ಮುಂತಾದವರು ಅತಿಥಿಗಳನ್ನು ಶಾಲು ಸ್ಮರಣಕ್ಕೆಗಳನ್ನು ನೀಡಿ ಗೌರವಿಸಿದರು, ವಿದುಷಿ ಸಿಂಚನಾ ಲಕ್ಷ್ಮಿ ಕೋಡಂದೂರು ವಂದಿಸಿದರು. 


ಭರತನಾಟ್ಯ ರಂಗಪ್ರವೇಶ:

ಕುಂಬಳೆಯ ನಾಟ್ಯವಿದ್ಯಾನಿಲಯದ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಶಿಷ್ಯೆಯಾದ ಕು| ವಿದುಷಿ ಸಿಂಚನ ಲಕ್ಷ್ಮಿ ಕೋಡಂದೂರು ಇವರು ಭರತನಾಟ್ಯ, ಸಂಗೀತ, ಪಾಠೇತರ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ. ತನ್ನ ಹಾವಭಾವಗಳಿಂದ ರಂಗಪ್ರವೇಶದಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. 


ಪುಷ್ಪಾಂಜಲಿ ಮತ್ತು ಗಜವದನ ಆದಿ ತಾಳ ಶ್ರೀ ರಂಜಿನಿ ರಾಗದಲ್ಲಿ ಪಾಪನಾಶ ಶಿವಂ ರಚನೆ, ಜತಿಸ್ವರ-ರಸಿಕಪ್ರಿಯ ರಾಗ-ಆದಿ ತಾಳ-ಲಾಲ್ಗುಡಿ ಜಯರಾಮನ್, ಶಬ್ದಂ-ರಾಗಮಾಲಿಕೆ-ಮಿಶ್ರ ಛಾಪು-ರಾಮಯ್ಯ ಪಿಳ್ಳೈ ಪದವರ್ಣ (ಮಾತೆ ಮಲಯಧ್ವಜ) -ಖಮಚ್ ರಾಗ-ಆದಿ ತಾಳ-ಮುತ್ತಯ್ಯ ಭಾಗವತರ್ ಕೃತಿ(ಉಮಾಮಹೇಶ್ವರಿ)-ರೇವತಿ ರಾಗ-ಆದಿ ತಾಳ-ಆಲತ್ತೂರು ವಿಜಯ ಕುಮಾರ್, ಪದಮ್ (ಅಲೈಪಾಯುದೇ)- ಕಾನಡ ರಾಗ-ಆದಿ ತಾಳ-ಉತ್ತುಕಾಡು ವೆಂಕಟ ಸುಬ್ಬಯ್ಯರ್ ದೇವರನಾಮ (ಹರಿಸ್ಮರಣೆ)-ಯಮನ ಕಲ್ಯಾಣಿ-ಆದಿ ತಾಳ-ಪುರಂದರ ದಾಸರು, ತಿಲ್ಲಾನ - ರಾಗಮಾಲಿಕೆ-ಆದಿ ತಾಳ-ದಂಡಾಯುಧ ಪಾಣಿ ಪಿಳ್ಳೈ ಮಂಗಳದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಸೇರಿದ್ದ ಜನಸ್ತೋಮದ ಮುಂದೆ ನರ್ತಿಸಿದ ನರ್ತಕಿ ಕಲಾಸಕ್ತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಟುವಾಂಗದಲ್ಲಿ ವಿದುಷಿ ಡಾ. ವಿದ್ಯಾಲಕ್ಷ್ಮಿ  ಕುಂಬಳೆ, ಹಾಡುಗಾರಿಕೆ ಯಲ್ಲಿ ವಿದ್ವಾನ್ ಶಿಜು ಕರುಣಾಕರನ್ ಕಣ್ಣೂರು, ವಸಂತ ಕುಮಾರ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು ಕಣ್ಣೂರು, ಕೊಳಲು ರಾಹುಲ್ ಪಯ್ಯನ್ನೂರು, ರಿದಂಪ್ಯಾಡ್‌ನಲ್ಲಿ ಪ್ರಭಾಕರ ಮಲ್ಲ ಸಹಕರಿಸಿದರು. ಮಲ್ಲಿಕಾ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top