ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಬಸವ ಜಯಂತಿ ಪ್ರಯುಕ್ತ 50 ಪೈಸೆ ಅಂಚೆ ಕಾರ್ಡ್ನಲ್ಲಿ ರಾಜ್ಯ ಮಟ್ಟದ ಬಸವಣ್ಣನ ಚಿತ್ರ ಬರೆಯುವ ಉಚಿತ ಸ್ಪರ್ಧೆ ಹಮ್ಮಿಕೊಂಡಿದ್ದು, ಅದರ ಫಲಿತಾಂಶ ಈ ಕೆಳಗಿನಂತಿದೆ ಎಂದು ಸಂಸ್ಥೆಯ ಸಂಸ್ಥಾಪಕರು, ತೀರ್ಪುಗಾರರಲ್ಲಿ ಒಬ್ಬರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸ್ಪರ್ಧಿಗಳ ವಯಸ್ಸಿನ ಅನುಗುಣವಾಗಿ ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿದ್ದು ಹಿರಿಯರ ವಿಭಾಗ ಪ್ರಥಮ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ನವ್ಯ ಮನೋಹರ ಪೈ, ದ್ವಿತೀಯ ಬಹುಮಾನ ದಾವಣಗೆರೆಯ ಲೀಲಾ ಪಿ. ತೃತೀಯ ಬಹುಮಾನ ಮಂಡ್ಯ ಜಿಲ್ಲೆಯ ನಾಗಮಂಗಲದ ಅನಿತಾ ಡಿ.ಆರ್. ಸಮಾಧಾನಕರ ಬಹುಮಾನಗಳು, ಮೈಸೂರಿನ ಸುಚಿತ್ರಾ ಗಣೇಶ್ ಶಾನಭಾಗ್, ಕೇರಳ ರಾಜ್ಯದ ಕಾಸರಗೋಡಿನ ರಾಜಶೇಖರ ಅಡಿಗ, ಉಡುಪಿ ಜಿಲ್ಲೆಯ ಹಿರಿಯಡಕದ ಜ್ಯೋತಿ ರಾಮಚಂದ್ರಹೊಳ್ಳ ಪಡೆದಿರುತ್ತಾರೆ.
ಕಿರಿಯರ ವಿಭಾಗ ಪ್ರಥಮ ಬಹುಮಾನ ಉಡುಪಿ ಜಿಲ್ಲೆಯ ಬ್ರಹ್ಮಾವರದ ದೃತಿ ಸಂತೋಷ್ ಪೂಜಾರಿ, ದ್ವಿತೀಯ ಬಹುಮಾನ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಸ್ವಾನಿ ಯರಗೊಪ್ಪ, ತೃತೀಯ ಬಹುಮಾನ ರಾಯಚೂರು ಜಿಲ್ಲೆಯ ಜಾಲಹಳ್ಳಿಯ ಶಶಾಂಕ, ಸಮಾಧಾನಕರ ಬಹುಮಾನಗಳು ಶಿವಮೊಗ್ಗ ಜಿಲ್ಲೆಯ ಕಾಚಿನಕಟ್ಟೆಯ ನಿತನ್ ಟಿ, ದಾವಣಗೆರೆ ಜಿಲ್ಲೆಯ ಕಾಕನೂರಿನ ಭೂಮಿಕಾ ಕೆ.ಎನ್. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ನಮಿತಾಶ್ರೀ ಬಹುಮಾನ ಪಡೆದಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಪ್ರಕಟಿಸಿದ್ದಾರೆ.
ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುತ್ತದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ