SSLC ಫಲಿತಾಂಶ: ಆಳ್ವಾಸ್ ಪ್ರೌಢಶಾಲೆಯ 81 ವಿದ್ಯಾರ್ಥಿಗಳಿಗೆ 625ರಲ್ಲಿ 600ಕ್ಕೂ ಹೆಚ್ಚು ಅಂಕ

Chandrashekhara Kulamarva
0



ವಿದ್ಯಾಗಿರಿ: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ SSLC ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಶಾಲೆಯ 81 ವಿದ್ಯಾರ್ಥಿಗಳು 625ರಲ್ಲಿ 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಾನ್ಯ (622), ಕ್ಷೀರಜಾ (621), ಹರೀಶ್ ಬಡಿಗೇರ್ (621), ಪವನ್ ಶರಣಬಸಪ್ಪ ಮೇಗೂರ್(621), ರಿಯಾ ವಿದ್ಯಾಧರ ಕಮಟೆ(621), ಪ್ರಜ್ಞಾ ಶೀತಲ್ ಪಾಟೀಲ್ (620), ಸಮೀಕ್ಷಾ ಸಂದೀಪ್ ಸಮಾಜನ್ನವರ್ (620), ಸಿಂಧೂ ಶೀತಲ್ ಚೌಗಲೆ(620), ಸುಪ್ರೀತಾ ಲಕ್ಷ್ಮಣ ನಾಯ್ಕ್ (620), ಆದಿತ್ಯ(620), ಚಿನ್ಮಯ್(620)ಅಂಕಗಳನ್ನು ಪಡೆಯುವುದರ ಮೂಲಕ ವಿಶಿಷ್ಠ ಸಾಧನೆ ಮಾಡಿದ್ದಾರೆ. 91 ವಿದ್ಯಾರ್ಥಿಗಳು ಶೇ95ಕ್ಕೂ ಅಧಿಕ, 161 ವಿದ್ಯಾರ್ಥಿಗಳು ಶೇ90ಕ್ಕೂ ಅಧಿಕ, 211 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು.


ಇಬ್ಬರು ವಿದ್ಯಾರ್ಥಿಗಳು ಐದು ವಿಷಯಗಳಲ್ಲಿ, ನಾಲ್ಕು ವಿಷಯಗಳಲ್ಲಿ 6 ವಿದ್ಯಾರ್ಥಿಗಳು, ಮೂರು ವಿಷಯಗಳಲ್ಲಿ 12, ಎರಡು ವಿಷಯಗಳಲ್ಲಿ 25, ಹಾಗೂ 1 ವಿಷಯದಲ್ಲಿ 46 ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ.


ಪ್ರಥಮ ಭಾಷೆ ಕನ್ನಡದಲ್ಲಿ 14, ದ್ವಿತೀಯ ಭಾಷೆ ಕನ್ನಡದಲ್ಲಿ 15, ತೃತೀಯ ಭಾಷೆ ಕನ್ನಡದಲ್ಲಿ 07, ಪ್ರಥಮ ಭಾಷೆ ಇಂಗ್ಲೀಷ್‌ನಲ್ಲಿ 2, ದ್ವಿತೀಯ ಭಾಷೆ ಇಂಗ್ಲೀಷ್ 4, ಪ್ರಥಮ ಭಾಷೆ ಸಂಸ್ಕೃತ 08, ತೃತೀಯ ಭಾಷೆ ಹಿಂದಿಯಲ್ಲಿ 42, ತೃತೀಯ ಭಾಷೆ ಸಂಸ್ಕೃತದಲ್ಲಿ 10, ಗಣಿತದಲ್ಲಿ 15, ಸಾಮಾನ್ಯ ವಿಜ್ಞಾನದಲ್ಲಿ 19, ಸಮಾಜ ವಿಜ್ಞಾನದಲ್ಲಿ 40 ವಿದ್ಯಾರ್ಥಿಗಳು ಶೇ 100 ಅಂಕ ಪಡೆದಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಇದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top