ಅಪಘಾತದಲ್ಲಿ ಮೃತಪಟ್ಟವರ ಮನೆಗೆ ತೆರಳಿ ಸಾಂತ್ವನ ಹೇಳಿದ ಶಾಸಕ ರಾಜೇಶ್ ನಾಯ್ಕ್

Upayuktha
0


ಬಂಟ್ವಾಳ: ಪುತ್ತೂರು ಕಬಕ ಸಮೀಪ ಕುವೆತ್ತಿಲ ತಿರುವಿನಲ್ಲಿ ಭೀಕರ‌ ಅಪಘಾತದಲ್ಲಿ ನರಿಕೊಂಬು ಗ್ರಾಮದ ಬೋರುಗುಡ್ಡೆ ನಿವಾಸಿ ಅರುಣ್  ಕುಮಾರ್ (45) ಮತ್ತು ಅವರ ಮಗ ವಿದ್ಯಾರ್ಥಿ ಧ್ಯಾನ್ (15) ಮೃತ ಪಟ್ಟಿದ್ದರು. ಸರಕಾರಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತದಲ್ಲಿ ಎರಡು ಜೀವ ಬಲಿಯಾಗಿತ್ತು. ಮರದ ಕೆಲಸ ಮಾಡುತ್ತಿದ್ದ ಬಡ ಕುಟುಂಬದ ದಿ.ಅರುಣ್ ಬೋರುಗುಡ್ಡೆಯವರ ಮನೆಗೆ  ಬಂಟ್ವಾಳ  ಶಾಸಕರಾದ  ರಾಜೇಶ್ ನಾಯ್ಕ್  ಉಳಿಪ್ಪಾಡಿಯವರು ಮನೆಗೆ ಭೇಟಿ ನೀಡಿ ಮೃತರ ಪತ್ನಿ ಹಾಗೂ ತಾಯಿ ಮತ್ತು ಮಗನಿಗೆ ಸಾಂತ್ವನ ಹೇಳಿದರು.


ಈ ಸಂದರ್ಭದಲ್ಲಿ ಅವರು ಅರುಣ್  ಬೋರುಗುಡ್ಡೆಯವರ ಕಿರಿಯ ಮಗನ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ತಾನು ಭರಿಸುವುದಾಗಿ ತಿಳಿಸಿದರು. ಅಪಘಾತದಿಂದ ಸಿಗುವ ಪರಿಹಾರ ಧನವನ್ನು ಆದಷ್ಟು ಬೇಗ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಫೋನ್ ಮಾಡಿ ತಿಳಿಸಿದರು. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಜೊತೆಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top