ಗುರುಪುರ ನಾಡ ಕಚೇರಿ ಕಟ್ಟಡ: ಶಾಸಕ ಡಾ. ಭರತ್ ಶೆಟ್ಟಿ ಅವರಿಂದ ಲೋಕಾರ್ಪಣೆ

Chandrashekhara Kulamarva
0

ವಾಸ್ತು ಪೂಜೆ, ಸುದರ್ಶನ ಹೋಮ, ಗಣಪತಿ ಹೋಮ ಸಹಿತ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ




ಗುರುಪುರ: ಮಂಗಳೂರು ತಾಲೂಕು ಗುರುಪುರದ ಹೊಸ ನಾಡಕಚೇರಿಯ ನೂತನ ಕಟ್ಟಡದ ಉದ್ಘಾಟನೆ ಇಂದು (ಮೇ 17) ನೆರವೇರಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಗುರುಪುರ ನಾಡ ಕಚೇರಿ ಕಟ್ಟಡ ವಾಸ್ತು ಪೂಜೆ, ಸುದರ್ಶನ ಹೋಮ, ಗಣಪತಿ ಹೋಮ ನೆರವೇರಿ, ಜನ ಸೇವೆಗಾಗಿ ಲೋಕಾರ್ಪಣೆಗೊಂಡಿತು.



ಗುರುಪುರ ನಾಡ ಕಚೇರಿಗೆ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 2020- 21ನೇ ಸಾಲಿನಲ್ಲಿ 18.84 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿ ಗುದ್ದಲಿ ಪೂಜೆಯನ್ನು ನೆರವೇರಿಸಿತ್ತು. ಕಾಮಗಾರಿಗಳು ಮುಕ್ತಾಯಗೊಂಡು ಇಂದು ಉದ್ಘಾಟನೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶಾಲಿನಿ. ಎಸ್, ಉಪಾಧ್ಯಕ್ಷ ಉದಯ ಆರ್ ರಾವ್, ಪಂ.ಸದಸ್ಯ ಸುದರ್ಶನ್, ರಮೇಶ್, ಪ್ರಮುಖರಾದ ಸೋಹನ್ ಅಧಿಕಾರಿ, ಮಾಧವ ಕಾಜಿಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು,


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top