"ಮೌನ ಮಾತಾದಾಗ" ಕವನ ಸಂಕಲನ ಬಿಡುಗಡೆ

Upayuktha
1 minute read
0


ಕಾಸರಗೋಡು: ಕಾಸರಗೋಡಿನ ಭರವಸೆಯ ಕವಯತ್ರಿ ಮೇಘಾ ಶಿವರಾಜ್ ಇವರ ಕವನ ಸಂಕಲನ "ಮೌನ ಮಾತಾದಾಗ" ಬಿಡುಗಡೆಗೊಂಡಿತು. ಸಂಧ್ಯಾ ರಾಣಿ ಅವರ ಕನ್ನಡ ಭವನ ಪ್ರಕಾಶನದ ಮೂಲಕ ಕೃತಿ ಪ್ರಕಟಿಸಲಾಗಿದೆ. 


ಇತ್ತೀಚೆಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆದ "ಬೇಕಲ ರಾಮನಾಯಕ ಸಂಸ್ಮರಣೆ ಕಾರ್ಯಕ್ರಮದಲ್ಲಿ, ಈ ಕೃತಿ ಬಿಡುಗಡೆ ಮಾಡಲಾಯಿತು. ದ.ಕ. ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಗೌರವ ಅಧ್ಯಕ್ಷ ಡಾ. ರವೀಂದ್ರ ಜೆಪ್ಪು ಇವರು, ರಾಮರಾಜ ಕ್ಷತ್ರಿಯ ಸೇವಾಸಂಘ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆಯವರಿಗೆ ಪುಸ್ತಕ ನೀಡಿದರು. 


ಮಂಗಳೂರಿನ ಸಾಹಿತಿ, ಕವಿ ಡಾ. ಕೊಲಚಪ್ಪೆ ಗೋವಿಂದ ಭಟ್ ಮುನ್ನುಡಿ ಬರೆದಿದ್ದು, ಡಾ. ಗೋವಿಂದ ಭಟ್ ಕೃತಿ ಪರಿಚಯ ಮಾಡಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷ ಶಶಿಧರ್ ನಾಯ್ಕ್ ಬೆನ್ನುಡಿ ಬರೆದು ಲೇಖಕಿಯನ್ನು ಹರಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಕಾಶಕಿ ಸಂಧ್ಯಾರಾಣಿ, ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಕೊಡಗು ಕನ್ನಡ ಭವನ ಅಧ್ಯಕ್ಷ ಬೊಳ್ಳಿಜಿರ ಬಿ. ಅಯ್ಯಪ್ಪ, ಶುಭ ನುಡಿ ಬರೆದ ವಿರಾಜ್ ಅಡೂರ್, ಕನ್ನಡ ಭವನ ಡಾ. ವಾಮನ್ ರಾವ್ ಬೇಕಲ್ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಸಾಹಿತಿ ಚಂದ್ರಹಾಸ ಎಂ. ಬಿ. ಚಿತ್ತಾರಿ, ಪ್ರಕಾಶ್ ಚಂದ್ರ ತೊಕ್ಕೊಟ್ಟು, ಪ್ರದೀಪ್ ಬೇಕಲ್, ರಾಜೇಶ್ ಕೋಟೆಕಣಿ ಮುಂತಾದವರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top