ರಿಪೋರ್ಟರ್ ಕರ್ನಾಟಕ ಸಂಪಾದಕ ಅಶೋಕ್ ಕಲ್ಲಡ್ಕಗೆ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ

Upayuktha
1 minute read
0
ಮೇ 24ರಂದು ಬೆಂಗಳೂರಿನಲ್ಲಿ ಪ್ರದಾನ




ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ನೀಡುವ ರಾಜ್ಯಮಟ್ಟದ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಗೆ ರಿಪೋರ್ಟರ್ ಕರ್ನಾಟಕ ಪ್ರಧಾನ ಸಂಪಾದಕ ಅಶೋಕ್ ಕಲ್ಲಡ್ಕ ಅವರು ಆಯ್ಕೆಗೊಂಡಿದ್ದು, ಮೇ 24ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


ವಿಜಯ ಕರ್ನಾಟಕ, ಜನವಾಹಿನಿ, ಕೆನರಾ ಟೈಮ್ಸ್ ಬಳಗದಲ್ಲಿ ವರದಿಗಾರ ಮತ್ತು ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಅಶೋಕ್ ಕಲ್ಲಡ್ಕ ಅವರು ರಿಪೋರ್ಟರ್ ಕರ್ನಾಟಕ ನ್ಯೂಸ್ ವೆಬ್ ಸೈಟ್ ಹಾಗೂ ರಿಪೋರ್ಟರ್ ಕರ್ನಾಟಕ ಮೀಡಿಯಾ ನೆಟ್ ವರ್ಕ್  ಸಂಸ್ಥೆಯನ್ನು 2020ರಲ್ಲಿ ಸ್ಥಾಪಿಸಿದ್ದರು. ಕೆನರಾ ಟೈಮ್ಸ್ ಬಳಗದ 'ಕನ್ನಡ ಜನ ಅಂತರಂಗ' ದಿನಪತ್ರಿಕೆ ಹಾಗೂ 'ಕರಾವಳಿ ಅಲೆ' ಸಂಜೆ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು, ಉಡುಪಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. ನಂತರ ಕೆನರಾ ಟೈಮ್ಸ್ ಬಳಗದ ಪತ್ರಿಕೆಯಲ್ಲಿ ಉಪ ಸಂಪಾದಕನಾಗಿ, 'ತೆರೆಮರೆ' ಡೈಲಿ ಅಂಕಣ ಮತ್ತು ಯುವ ಪುಟದಲ್ಲಿ 'ಸಲ್ಲಾಪ' ವೀಕ್ಲಿ ಅಂಕಣ ಬರೆಯುತ್ತಿದ್ದರು.


ಜನವಾಹಿನಿಯಲ್ಲಿ ವಿದೇಶಿ ಪುಟ ಮತ್ತು ಮುಖಪುಟದ ಉಪ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದರು. ವಿಜಯ ಕರ್ನಾಟಕದಲ್ಲಿ ಮಂಗಳೂರು ವರದಿಗಾರನಾಗಿ ಸಾಕಷ್ಟು ವಿಶೇಷ ವರದಿ ನೀಡಿದ್ದರು. ವಿಜಯ ಕರ್ನಾಟಕದ ಯೂತ್ ಪೇಜ್ ನಲ್ಲಿ 'ಹಾಗೆ ಸುಮ್ಮನೆ' ವಾರದ ಅಂಕಣ ಬರೆಯುತ್ತಿದ್ದರು. ಪತ್ರಿಕೋದ್ಯಮದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 24ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top