ರಾಹುಲ್‌ಗಾಂಧಿ ಸುಳ್ಳು ಹೇಳ್ತಿದಾರಾ? ಸಚಿವ ಜೈಶಂಕರ್ ಸುಳ್ಳು ಹೇಳ್ತಿದಾರಾ?

Upayuktha
0


ಇತಿಹಾಸದಲ್ಲಿ ಕಾಂಗ್ರೆಸ್ ಮಾಡಿದ ಎಲ್ಲ ತಪ್ಪುಗಳಿಗೆ ನಾನು ಜವಾಬ್ದಾರಿ ಹೋರುತ್ತೇನೆ ಅಂತ ಒಂದಿನ ಹೇಳುತ್ತೆ!!

ಮರುದಿನ, 'ಕಾಶ್ಮೀರವನ್ನು ಸೇರಿಸಿಕೊಂಡು ಪಾಕಿಸ್ತಾನ ತಯಾರಿಸಿದ ನಕ್ಷೆಯನ್ನು', ಕಾಂಗ್ರೆಸ್ ತನ್ನ ಪಕ್ಷದ X ನಲ್ಲಿ ಹಾಕಿಕೊಳ್ಳುತ್ತೆ!!   ಆಮೇಲೆ ಡಿಲೀಟ್ ಮಾಡುತ್ತೆ!!


ಪೆಹಲ್ಗಾಮ್ ನಲ್ಲಿ ಹಿಂದುಗಳ ಮೇಲೆ ಪಾಕ್ ಉಗ್ರರು ದಾಳಿ ಮಾಡಿದ್ದಕ್ಕೆ, ಪ್ರತಿಕಾರವಾಗಿ ಭಾರತೀಯ ಸೈನ್ಯ ಯುದ್ಧಕ್ಕೆ ಸಿದ್ದ ಅಂದ ಕೂಡಲೆ ಕಾಂಗ್ರೆಸ್ ಶಾಂತಿ, ಅಹಿಂಸೆ ಮಂತ್ರ ಹೇಳುತ್ತೆ. 


 


 ಪಕ್ಷಕ್ಕೆ ಗಾಂಧೀಜಿ ನೆನಪು!


ಸೈನ್ಯ ಪಾಕ್ ನೆಲಕ್ಕೆ ಹೋಗಿ, ಯುದ್ಧವನ್ನು ಮಾಡಿ ಮುಗಿಸುವಾಗ, ಕಾಂಗ್ರೆಸ್ ಯುದ್ಧವನ್ನು ಇನ್ನೂ ಮಾಡಬೇಕಿತ್ತು ಅಂತ ಇಂದಿರಾಗಾಂಧಿಯನ್ನು ನೆನಪು ಮಾಡಿಕೊಳ್ಳುತ್ತೆ!


ಕಾಂಗ್ರೆಸ್‌ನಲ್ಲಿರುವವರಲ್ಲಿ ಒಬ್ಬೊಬ್ಬರದ್ದು ಒಂದೊಂದು ಮಾತು, ಮತ್ತು ದಿನಕ್ಕೊಂದು ಮಾತು!! ಖಚಿತತೆ ಇಲ್ಲ, ನಿಶ್ಚಿತತೆ ಇಲ್ಲ.  


ಕಾಂಗ್ರೆಸ್ ಸತ್ಯಕ್ಕೆ ದೂರವಾದ, ದ್ವೇಷ, ಆಕ್ರೋಶ, ತುಷ್ಟೀಕರಣದ ಮಾತಾಡುತ್ತ, ಜನರ ನಂಬಿಕೆಗಳನ್ನು ಕಳೆದುಕೊಳ್ಳುತ್ತಿದೆ ಅನಿಸುತ್ತೆ.  


ಮೋದಿ, ಜೈಶಂಕರ್ ಮಾತುಗಳೇ ಜನರಲ್ಲಿ ಹೆಚ್ಚು ನಂಬಿಕೆ ಹುಟ್ಟಿಸುತ್ತಿದೆ. ಕಾಂಗ್ರೆಸ್ 'ಮಾತಾಡಿ' ಗಂಭೀರತೆಯನ್ನು ಕಳೆದುಕೊಳ್ಳುವುದನ್ನು ನೋಡಿ ಜನರಲ್ಲಿ ಬೇಸರ ಹುಟ್ಟುತ್ತಿದೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top