ಶುಭನುಡಿ: ಶ್ರೀ ಗುರುಭ್ಯೋ ನಮಃ

Upayuktha
0



ಗುರು ಅನಿಸುವವರು ಗುರಿಯನ್ನು ತೋರುವವರು. ಗುರುವೆನಿಸಲು ಅರ್ಹತೆ, ಯೋಗ್ಯತೆ ಎರಡೂ ಬೇಕು. ಸುಖಾಸುಮ್ಮನೆ ಗುರುವಿನ ಪಟ್ಟ ಬಾರದು. ಜೊತೆಗೆ ಅದೃಷ್ಟವೂ ಬೇಕು. ನಮ್ಮ ಕುಲಪುರೋಹಿತರನ್ನು ಗುರುಗಳ ಸ್ಥಾನದಲ್ಲಿ ನೋಡಿ ಗೌರವ ಸಲ್ಲಿಸುವುದು ನಮ್ಮ ಸಂಸ್ಕೃತಿ, ಆಚಾರ-ವಿಚಾರ ಪರಂಪರೆಯಾಗಿದೆ. 


ವಿಚಾರಗಳನ್ನು ಅರಿತವರೂ, ಮುಂದೆಯೂ ಅರಿಯುವ ಮನಸ್ಸಿರುವವರಾಗಿರಬೇಕು. ಜ್ಞಾನದಾಹವಿರಬೇಕು. ಶ್ರೇಷ್ಠ ಗುಣಗಳು ಮನೆ ಮಾಡಿರಬೇಕು. ಮಕ್ಕಳಿಗೆ ಒಂದಕ್ಷರ ಕಲಿಸಿದವರೂ ಗುರುವೇ. ಮನೆಯಲ್ಲಿ"ಹೆತ್ತವರೇ" ಅದರಲ್ಲೂ ತಾಯಿ ಮೊದಲ ಗುರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಹೇಳುವವರೂ ಗುರುಗಳೇ. ಗುರುಗಳನ್ನು ಕಂಡಾಗ 'ನಮಸ್ಕಾರ' ಮಾಡುವುದು ನಮ್ಮ ಪರಂಪರೆ. ಗುರುವಲ್ಲಿ ಭಗವಂತನನ್ನು ಕಾಣಬೇಕಂತೆ.


ಗುರುನಿಂದಾಕರಂ ದೃಷ್ಟ್ವಾ ಧಾವಯೇದಥ ವಾಸಯೇತ್/

ಸ್ಥಾನಂ ವಾ ತತ್ಪರಿತ್ಯಾಜ್ಯಂ ಜಿಹ್ವಾ ಛೇದಾಕ್ಷಮೋಯದಿ//


ಗುರು ನಿಂದೆಯನ್ನು ಯಾರೂ ಯಾವತ್ತೂ ಮಾಡಬಾರದು. ಗುರುಗಳು ಸಹ ತನ್ನ ಸ್ಥಾನಮಾನವರಿತಿರಬೇಕು. ಗುರುನಿಂದೆ ಮಾಡುವಲ್ಲಿ ಕೇಳುತ್ತಾ ಕೂರುವುದು ಸಹ ಮಹಾಪಾಪವಂತೆ. ಸಾಧ್ಯವಾದರೆ ಗುರು ನಿಂದೆ ಮಾಡುವವರ ಮಾತನ್ನು ಸಹ ನಿಲ್ಲಿಸಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ದೂರ ಸರಿಯಬೇಕು.


- ರತ್ನಾ ಕೆ ಭಟ್.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top