ಮೇ 9; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಉಗ್ರ ಹೋರಾಟ

Chandrashekhara Kulamarva
0



ಬಳ್ಳಾರಿ:  ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಏರಿಸಿರುವ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮೇ 9ರಂದು  ಉಗ್ರ ಹೋರಾಟ ಹಮ್ಮಿಕೊಂಡಿದೆ. ಅದರ ಪೂರ್ವಭಾವಿಯಾಗಿ ಸಿರುಗುಪ್ಪ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಅವರ  ನೇತೃತ್ವದಲ್ಲಿ ಮತ್ತು ತಾಲೂಕು ಘಟಕ ಅಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಮಾಡಿಸಲಾಯಿತು. ಸಿರುಗುಪ್ಪ ವಿಧಾನಸಭಾ ಕ್ಷೇತ್ರದಿಂದ ದೊಡ್ಡ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. 


ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಡಾ. ಅರುಣ  ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡ ಹುಲಗಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ ಎಸ್ ಸಿದ್ದಪ್ಪ , ಹಿರಿಯರಾದ ಎಂ ಆರ್ ಗೌಡ್ರು, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಮೆಕ್ಕೆಲ್ ವೀರೇಶ, ಮುಖಂಡರುಗಳಾದ ಚಾಗಿ ಸುಬ್ಬಯ್ಯ, ನಾಗೇಶಪ್ಪ, ವೀರನಗೌಡ, ಮಧು ,ಶಿವರಾಮ, ಗೌಡ, ನಗರ ಸಭೆಯ ಸದಸ್ಯರಾದ ನಟರಾಜ, ಮೋಹನ್ ರೆಡ್ಡಿ, ಮಹಾದೇವ, ರಾಮಕೃಷ್ಣ ,ಮತ್ತು ಹೆಚ್ಚ ಶೇಖಪ್ಪ, ಶರಣಬಸವ, ಫಿಡ್ಡಯ್ಯ, ಚಿರಂಜೀವಿ ರೆಡ್ಡಿ, ಮಲ್ಲನಗೌಡ, ಈರಯ್ಯ, ರಾಮರಾಜ, ಹೊನ್ನಪ್ಪ ,ಶೇಕ್ಷವಲ್ಲಿ, ಜುಬಲ್ ಸಾಬ್, ಮಲ್ಲಯ್ಯ, ಗಾದಿಲಿಂಗ, ಹೇಮನಗೌಡ, ಫಕೀರಯ್ಯ, ಬಸವರಾಜ, ಮಾದಣ್ಣ, ಗಂಗಾಧರ, ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top