ಬಳ್ಳಾರಿ: ವಿಶ್ವಗುರು ಬಸವಣ್ಣನವರ 891ನೇ ಜಯಂತೋತ್ಸವದ ಅಂಗವಾಗಿ ಸಿರುಗುಪ್ಪ ನಗರದ ದೇವಲಾಪುರ ಕ್ರಾಸ್ ಬಳಿ ಸ್ಥಾಪಿಸಿರುವ ಜಗಜ್ಯೋತಿ ಬಸವಣ್ಣನವರ ಪುತ್ತಳಿಗೆ ಹೂವಿನಹಾರ ಹಾಕಿ ನಮನಗಳನ್ನು ಸಲ್ಲಿಸಲಾಯಿತು.
ಬಿಜೆಪಿ ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಜಯಂತಿಯನ್ನ ಆಚರಣೆ ಮಾಡಲಾಯಿತು. ಹಾಗೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಹಳೆಕೋಟೆ ಗ್ರಾಮದಲ್ಲಿ ನಡೆದ ಶ್ರೀ ಜಗಜ್ಯೋತಿ ಬಸವಣ್ಣನವರ ಮೆರವಣಿಗೆಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾದ ಎಂ.ಎಸ್. ಸೋಮಲಿಂಗಪ್ಪ ಮತ್ತು ಅವರ ಪುತ್ರ, ಬಿಜೆಪಿ ಯುವಮೋರ್ಚ ಜಿಲ್ಲಾದ್ಯಕ್ಷರಾದ ಎಂ.ಎಸ್. ಸಿದ್ದಪ್ಪ ಭಾಗಿ ಯಾಗಿ ಬಸವಣ್ಣನವರ ಪಾದಗಳಿಗೆ ಪುಷ್ಪಾನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಕುಂಟ್ನಾಳ್ ಮಲ್ಲಿಕಾರ್ಜುನ ಅಣ್ಣನವರು ಹಿರಿಯರಾದ ಎಂ ಆರ್ ಗೌಡ್ರು ನಗರಸಭೆಯ ಸದಸ್ಯರಾದ ಮೇಕೆಲಿ ವೀರೇಶ್ ನಟರಾಜ ಮಹದೇವ ಮೋಹನ್ ರೆಡ್ಡಿ ವೆಂಕಟೇಶ್ ಶೇಖಪ್ಪ ಶಂಕ್ರಪ್ಪ ಈರಣ್ಣ ಮುಂತಾದ ಮುಖಂಡರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ