ಆರಂಭಗೊಳ್ಳಲಿರುವ ನಾಲ್ಕು ಇಂಜಿನಿಯರಿಂಗ್ ಕೋರ್ಸ್ ಗಳು:
1. B. Tech in Computer Science & Engineering (ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್)
2. B. Tech in Computer Science & Engineering (ಯಾಂತ್ರಿಕ ಬುದ್ಧಿಮತ್ತೆ ಮತ್ತು ಯಂತ್ರಾಭ್ಯಾಸ)
3. B. Tech in Information Science & Engineering (ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್)
4. B. Tech in Electronics & Communication Engineering (ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್)
ವಿಶ್ವವಿದ್ಯಾನಿಲಯದ ಸೆಂಟೆನರಿ ಮೈದಾನದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಆಧುನಿಕ ಕಟ್ಟಡದಲ್ಲಿ ಈ ಇಂಜಿನಿಯರಿಂಗ್ ತರಗತಿಗಳು ನಡೆಯಲಿವೆ. ಹೊಸ ಸುಸಜ್ಜಿತ ಕಟ್ಟಡದಲ್ಲಿ ನಾಲ್ಕು ವಿಭಿನ್ನ ಬಗೆಯ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಬೇಕಾದ ಹೈಟೆಕ್ ಮಾದರಿಯ ಸ್ಮಾರ್ಟ್ ತರಗತಿಗಳು, ವಿನೂತನ ಬಗೆಯ ಅತ್ಯಾಧುನಿಕ
ಪ್ರಯೋಗಶಾಲೆಗಳು, ಸಂಶೋಧನಾ ಕೇಂದ್ರಗಳು ಇರಲಿವೆ. ಈ ಕೋರ್ಸ್ಗಳ ಪಠ್ಯಕ್ರಮಗಳು ಉದ್ಯಮಕೇಂದ್ರಿತವಾಗಿದ್ದು, ಮೌಲ್ಯಾಧಾರಿತ ಮತ್ತು ಅತ್ಯುತ್ತಮ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡುವ ಉದ್ದೇಶವನ್ನು ವಿಶ್ವವಿದ್ಯಾನಿಲಯ ಹೊಂದಿದೆ. ಮಾತ್ರವಲ್ಲದೆ ಕೋರ್ಸ್ಗಳನ್ನು ಹೆಚ್ಚು ವೃತ್ತಿಪರಗೊಳಿಸಲು ಮತ್ತು ಪ್ರಯೋಜನಕಾರಿಯಾಗಿಸಲು ಸಮಾನಮನಸ್ಕ ಸಂಸ್ಥೆಗಳ ಜೊತೆಗಿನ ಶೈಕ್ಷಣಿಕ ಸಹಯೋಗವನ್ನು ಸಂಸ್ಥೆ ಪಡೆದುಕೊಳ್ಳಲಿದೆ. ಈ ಮೂಲಕ ಜಾಗತಿಕ ಮಟ್ಟದ ಗುಣಮಟ್ಟದ ಶಿಕ್ಷಣದ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ ಬದ್ಧವಾಗಿದೆ. ಜೊತೆಗೆ ಮುಂದಿನ ತಲೆಮಾರಿನ ಶ್ರೇಷ್ಠ ಇಂಜಿನಿಯರುಗಳನ್ನು ಮತ್ತು ತಾಂತ್ರಿಕ ತಜ್ಞರನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಇತ್ತೀಚೆಗೆ ನ್ಯಾಕ್ ಮೌಲ್ಯಮಾಪನದಲ್ಲಿ ಅತ್ಯುನ್ನತ ಗ್ರೇಡ್ A++ನ್ನು ಪಡೆದುಕೊಂಡಿತ್ತು. ಇದೀಗ ಇಂಜಿನಿಯರಿಂಗ್ ಶಿಕ್ಷಣದ ಮೂಲಕ ಸಂಸ್ಥೆಯ ಶೈಕ್ಷಣಿಕ ಪರಂಪರೆಯು ಮತ್ತಷ್ಟು ವ್ಯಾಪಕಗೊಳ್ಳಲಿದ್ದು, ನಮ್ಮ ರಾಷ್ಟ್ರದ ತಾಂತ್ರಿಕ ಪ್ರಗತಿಗೆ ಇದೊಂದು ಸಮರ್ಥ ಕೊಡುಗೆಯಾಗಲಿದೆ.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯಕ್ಕೆ ಇಂಜಿನಿಯರಿಂಗ್ ಶಿಕ್ಷಣದ ಅನುಮೋದನೆ ಸಿಕ್ಕಿರುವುದನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ರೆ. ಡಾ ಪ್ರವೀಣ್ ಮಾರ್ಟಿಸ್ ಅವರು, “ಸಂತ ಅಲೋಶಿಯಸ್ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದು ಆರಂಭಗೊಂಡಿದೆ. ಇದು ನಮಗೆಲ್ಲ ಅತ್ಯಂತ ಸಂತಸದ ಕ್ಷಣವಾಗಿದೆ. ಸಾಮಾಜಿಕ ಪ್ರಗತಿಯ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ನಾವು ನೈತಿಕತೆಯ ಭದ್ರ ಅಡಿಪಾಯದಲ್ಲಿ ವಿಫುಲ ಉದ್ಯೋಗಾವಕಾಶದ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡಲು ಬದ್ದರಾಗಿದ್ದೇವೆ” ಎಂದರು.
2025-26ನೇ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ: www.staloysius.edu.in ಮಾಹಿತಿಗಾಗಿ ಸಂಪರ್ಕಿಸಿ: +91 8244117701, 7975277782
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ