ಮಧ್ಯರಾತ್ರಿ ಮಹಿಳೆಯರು, ಯುವತಿಯರು ಇರುವ ಮನೆಗೆ ನುಗ್ಗಿ ದರ್ಪ ಬೇಡ: ಡಾ. ಭರತ್ ಶೆಟ್ಟಿ

Upayuktha
1 minute read
0


ಮಂಗಳೂರು: ಮಹಿಳೆಯರು, ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು ಇರುವ ಹಿಂದೂ ಕುಟುಂಬದ ಮನೆಗಳಿಗೆ ಮಧ್ಯರಾತ್ರಿ ನುಗ್ಗಿ ದರ್ಪ ತೋರಿಸುತ್ತಿರುವ ಪ್ರವೃತ್ತಿಯನ್ನು ಪೊಲೀಸ್ ಇಲಾಖೆ ತಕ್ಷಣ ನಿಲ್ಲಿಸಬೇಕು. ಉದ್ವಿಗ್ನತೆಯನ್ನು ನಿಲ್ಲಿಸುವ ಬದಲು ಇಲಾಖೆ ಹೆಚ್ಚಿಸಬಾರದು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ. 


ಕೊಲೆಯ ಸಂಚು ಗೊತ್ತಿದ್ದರೂ ಸುಹಾಸ್ ಶೆಟ್ಟಿ ಅವರ ಕೊಲೆಯನ್ನು ತಪ್ಪಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಇದೀಗ ತನ್ನ ತಪ್ಪನ್ನು, ವೈಫಲ್ಯವನ್ನು ಮರೆಮಾಚುವ ಸಲುವಾಗಿ ಸಿಕ್ಕಿದವರನ್ನೆಲ್ಲಾ ಜೈಲಿಗೆ ತಳ್ಳುವ ಮೂಲಕ ದರ್ಪದ ಪ್ರವೃತ್ತಿ, ಮೆರೆಯುತ್ತಿದೆ. ವಿನಾಕಾರಣ ಕಿರುಕುಳ ನೀಡುವುದನ್ನ ಮಧ್ಯರಾತ್ರಿ ಮನೆಗೆ ನುಗ್ಗುವುದನ್ನು ತಕ್ಷಣ ನಿಲ್ಲಿಸಬೇಕು.


ಹಿಂದೂ ಕುಟುಂಬ ಎಲ್ಲಿ ತಮ್ಮ ಮಕ್ಕಳಿಗೆ ಕಂಟಕ ಎದುರಾಗುವುದೋ ಎಂದು ಆತಂಕದಲ್ಲಿ ಇರುವಾಗ, ಪೊಲೀಸರು ಕಿರುಕುಳ ನೀಡುವುದು ಸರಿಯಲ್ಲ. ತಕ್ಷಣ ಈ ಧಿಮಾಕು ತೋರುವುದನ್ನು ಬಿಡಿ. ಇಲ್ಲದಿದ್ದಲ್ಲಿ ಮಂಗಳೂರು ನಗರದಾದ್ಯಂತ ಇರುವ ಪೊಲೀಸ್ ಠಾಣೆಯ ಮುಂಭಾಗ ಹಗಲು ರಾತ್ರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top