ಮಾತೃ ಭಾಷೆಯಲ್ಲಿ ಸಿಬಿಎಸ್ಇ ಪ್ರಾಥಮಿಕ ಶಿಕ್ಷಣ: ಕಲ್ಕೂರ ಶ್ಲಾಘನೆ

Upayuktha
0


ಮಂಗಳೂರು: ಪೂರ್ವ ಪ್ರಾಥಮಿಕ ಮಟ್ಟದಿಂದ ಎರಡನೇ ತರಗತಿಯ ವರೆಗೆ ಮೊದಲ ಐದು ವರ್ಷಗಳ ಶಿಕ್ಷಣವನ್ನು ಆಯಾಯ ರಾಜ್ಯಗಳ ಮಾತೃಭಾಷೆ ಯಲ್ಲಿ, ಕರ್ನಾಟಕದಲ್ಲಿ ಕನ್ನಡದಲ್ಲೇ ಮಕ್ಕಳಿಗೆ  ಶಿಕ್ಷಣ ನೀಡಬೇಕೆಂದು ಆದೇಶಿಸಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ನಿರ್ದೇಶನ ನೀಡಿರುವುದು ಸ್ವಾಗತಾರ್ಹ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.


ಇದು ನಮ್ಮ ಬಹು ದಿನಗಳ ಕನಸಾಗಿತ್ತು, ಈ ಹಿಂದೆ ಬಿ.ಎಂ ಇದಿನಬ್ಬ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಮಾತ್ರವಲ್ಲ ಸಿದ್ಧಲಿಂಗಯ್ಯನವರ ಕಾಲಾವಧಿಯಲ್ಲೂ ಈ ಕುರಿತು ಕೇಂದ್ರೀಯ ಶಿಕ್ಷಣ ಮಂಡಳಿಗೆ ಕನ್ನಡಿಗರ ಪರವಾಗಿ ತಮ್ಮ ಒತ್ತಾಸೆಯನ್ನು ವ್ಯಕ್ತಪಡಿಸಿರುವುದನ್ನು ಕಲ್ಕೂರ ಸ್ಮರಿಸಿಕೊಂಡಿದ್ದಾರೆ.


ಮಾತೃಭಾಷೆ ಹಾಗೂ ಮಾತೃಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಇದೊಂದು ಉತ್ತಮ ನಿಲುವು ಆಗಿದ್ದು ದೇಶದ ಸಂಸ್ಕೃತಿ ಹಾಗೂ ಮಾತೃಭಾಷೆಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದರು. ರಾಷ್ಟ್ರದಾದ್ಯಂತ ನೆಲೆಸಿರುವ ಕನ್ನಡಿಗರ ಸಹಿತ ಪ್ರತಿಯೊಬ್ಬರೂ ಈ ಆದೇಶವನ್ನು ಸಂಭ್ರಮಿಸುವರು ಎಂದು ಕಲ್ಕೂರ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top