ಮಾತೆಗೆ ಮಮತೆಯ ವಂದನೆ...

Upayuktha
0

ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು




ಬಿರುಬೇಸಿಗೆಯಲಿ 

ಮಂಜಿನ ಹನಿಯಂತೆ ನೀನು,

ಮರುಭೂಮಿಯಲಿ ಕಂಡ 

ಓಯಸಿಸ್ ನಂತೆ ನೀನು...


ಕಂದನ ತೊದಲನುಡಿಗೆ 

ಮನಸೋಲುವ 

ಮಾತೃಹೃದಯಕೆ  

ಸಮನಾರು?


ಅಮ್ಮ ನಿನ್ನ 

ಮಾತೃಪ್ರೇಮಕೆ 

ಸೋಲದ 

ಮಗು ಯಾರು?


ಅಮೃತಧಾರೆ 

ಅಮ್ಮನ ಪ್ರೀತಿ

ಸುಮಧುರ ಸುಮಧುರ 

ಅವಳ ಮಮತೆ,


ಅಸದೃಶ ದೇವರ 

ರೂಪವೇ ನೀನಲ್ಲವೇ!

ಇಂಥ ಮಾತೆಯ 

ಮಗುವಾದ ನಾನೇ ಧನ್ಯನಲ್ಲವೇ!


ನನ್ನ ಕೋಟಿ ನಮನಗಳು

ಈ ಮಾತೆಗೆ..


- ರೇಖಾ.ಮುತಾಲಿಕ್ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top