ಭಾರತದ ಗೆಲುವಿಗಾಗಿ ಕದ್ರಿ ದೇವಸ್ಥಾನದಲ್ಲಿ ವಿಶೇಷ ರುದ್ರ ಪಾರಾಯಣ

Upayuktha
0

ಶಿವಳ್ಳಿ ಸ್ಪಂದನ ರಿ ಮಂಗಳೂರು ಮತ್ತು ರುದ್ರ ಸಮಿತಿ ಭಾರತಿ ಕಾಲೇಜು ನಂತೂರು ವತಿಯಿಂದ ಆಯೋಜನೆ




ಮಂಗಳೂರು: ಭಾರತ ಸರ್ಕಾರಕ್ಕೆ ಮತ್ತು ಭಾರತದ ಯೋಧರಿಗೆ ಆತ್ಮಸ್ಥೈರ್ಯವನ್ನು ನೀಡಲು ಶನಿವಾರ ಬೆಳಗ್ಗೆ (ಮೇ 10) ಶ್ರೀ ಮಂಜುನಾಥ ದೇವಸ್ಥಾನ ಕದ್ರಿಯಲ್ಲಿ ಶಿವಳ್ಳಿ ಸ್ಪಂದನ ರಿ ಮಂಗಳೂರು ಮತ್ತು ರುದ್ರ ಸಮಿತಿ ಭಾರತಿ ಕಾಲೇಜು ನಂತೂರು ಇಲ್ಲಿನ ರುದ್ರ ಪಾರಾಯಣ ಮಿತ್ರರು ಸೇರಿ ಶ್ರೀ ಮಂಜುನಾಥ ದೇವರಲ್ಲಿ ರುದ್ರ ಪಾರಾಯಣ ಮೂಲಕ ಪ್ರಾರ್ಥನೆ ಮಾಡಿದರು.


ಕದ್ರಿಯ ಮಾತಾ ಕೃಪದಲ್ಲಿ ನಡೆದ ಸಹೃದಯಿಗಳ ಸಾಮಾನ್ಯ ಸಭೆಯಲ್ಲಿ ಶ್ರೀ ಕೃಷ್ಣ ಭಟ್ ಶಿವಳ್ಳಿ ಸ್ಪಂದನ ರಿ ಮಂಗಳೂರು, ಡಾ. ರಾಜೇಂದ್ರ ಪ್ರಸಾದ, ಮತ್ತು ಪಯ ಶ್ರೀಕೃಷ್ಣ ಭಟ್ ರುದ್ರ ಸಮಿತಿ ಭಾರತಿ ಕಾಲೇಜು ನಂತೂರು ಇವರು ಪ್ರಸಕ್ತ ವಿದ್ಯಮಾನ ಸಮಾಜ ಅಂತಾರಾಷ್ಟ್ರೀಯ ಉಗ್ರರ ಚಟುವಟಿಕೆ ದಮನ ಮಾಡುವ ಹಿನ್ನೆಲೆಯಲ್ಲಿ ಬ್ರಾಹ್ಮಣರಾದ ನಾವೆಲ್ಲರೂ ರುದ್ರ ಪಾರಾಯಣ ಮಾಡಿ ಭಾರತ ಸರ್ಕಾರಕ್ಕೆ ಮತ್ತು ಭಾರತದ ಯೋಧರಿಗೆ ಆತ್ಮಸ್ಥೈರ್ಯವನ್ನು ನೀಡಲು ಒಟ್ಟಾಗಿ ನಿಮ್ಮ ನಿಮ್ಮ ಮನೆಯ ಹತ್ತಿರದ ದೇವಸ್ಥಾನದಲ್ಲಿ ಯಾವುದೇ ವೇದ ಪಾರಾಯಣ ಮಾಡಬೇಕು ಎಂದು ಕರೆ ನೀಡಿದರು. ಡಾ ಗುರುರಾಜ ಕಟೀಲು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top