ಮುದ್ರಣಾಲಯದ ಸಿಬ್ಬಂದಿಗಳಿಂದ 'ಡೆಡ್‌ಲೈನ್ ಕತೆಗಳು' ಪುಸ್ತಕ ಬಿಡುಗಡೆ

Upayuktha
0



ಬೆಂಗಳೂರು: ಪ್ರಸಿದ್ಧ ಸಾಹಿತಿಗಳು, ರಾಜಕೀಯ ನಾಯಕರು, ಗಣ್ಯ ವ್ಯಕ್ತಿಗಳು ಪುಸ್ತಕ ಬಿಡುಗಡೆ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಯುವ ಕತೆಗಾರ, ಉಜಿರೆಯ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾಗಿರುವ ಸಂಜಯ್ ಚಿತ್ರದುರ್ಗ ಅವರ ಮೊದಲ ಕಥಾ ಸಂಕಲನ 'ಡೆಡ್‌ಲೈನ್ ಕತೆಗಳು' ಪುಸ್ತಕವನ್ನು ಮುದ್ರಣಾಲಯದ ಸಿಬ್ಬಂದಿಗಳು ಬಿಡುಗಡೆಗೊಳಿಸಿದ್ದಾರೆ.  


ಬೆಂಗಳೂರಿನ ಮಾಗಡಿ ರೋಡ್ ಸಮೀಪದ 'ಎ.ಎಂ. ಪ್ರಿಂಟರ್ಸ್'ನಲ್ಲಿ ಗುರುವಾರ, ಮುದ್ರಣಾಲಯದ ಸಿಬ್ಬಂದಿಗಳೇ ಪುಸ್ತಕವನ್ನು ಬಿಡುಗಡೆಗೊಳಿಸಿದರು. 


ಒಂದು ಪುಸ್ತಕವು ಗುಣಮಟ್ಟದಿಂದ ರೂಪುಗೊಳ್ಳುವುದರ ಹಿಂದೆ, ಮುದ್ರಣಾಲಯದ ಸಿಬ್ಬಂದಿಯ ಅಪಾರ ಪರಿಶ್ರಮವಿರುತ್ತದೆ‌. ಆದರೆ, ಅವರು ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಇಲ್ಲ. ಪುಸ್ತಕ ಲೋಕದ ಅಜ್ಞಾತ ಯೋಧರಂತೆ  ಅವರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಅವರಿಗೆ ಗೌರವ ನೀಡುವ ಸಲುವಾಗಿ ಮುದ್ರಣಾಲಯದ ಸಿಬ್ಬಂದಿಗಳಿಂದಲೇ ಪುಸ್ತಕ ಬಿಡುಗಡೆ ಮಾಡಿಸಲಾಯಿತು ಎಂದು ಕತೆಗಾರ ಸಂಜಯ್ ಚಿತ್ರದುರ್ಗ ಹೇಳಿದರು. 


'ಡೆಡ್‌ಲೈನ್ ಕತೆಗಳು' ಪುಸ್ತಕವು ಸ್ಪರ್ಧೆಗಳಿಗೆಂದೇ ಬರೆದ ಒಂಬತ್ತು ಕತೆಗಳಿಂದ ಕೂಡಿದ್ದು, ಈ ಕತೆಗಳು ವಿದ್ಯಾರ್ಥಿ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಹಾಗೂ ಕನ್ನಡದ ಪ್ರಮುಖ ಕಥಾ ಸ್ಪರ್ಧೆಗಳಲ್ಲಿ ಮೆಚ್ಚುಗೆ ಪಡೆದ ಕತೆಗಳಾಗಿವೆ. ಈ ಕಥಾ ಸಂಕಲನವನ್ನು 'ಪ್ರಕಟಣೆ ಜಾರಿಯಲ್ಲಿದೆ..' ಎನ್ನುವ ಸ್ವ- ಪ್ರಕಾಶನದ ಮೂಲಕ ಪ್ರಕಟಿಸಲಾಗಿದೆ. ಈ ಪುಸ್ತಕವು ಎರಡು ವಿಭಿನ್ನ ಮುಖಪುಟಗೊಂದಿಗೆ ಕೂಡಿದೆ ಎಂದು ತಿಳಿಸಿದರು. 


ಈ ಸಂದರ್ಭದಲ್ಲಿ ಎ.ಎಂ. ಪ್ರಿಂಟರ್ಸ್‌ನ ಮಾಲೀಕರಾದ ಬಲರಾಮ್, ಲೋಕೇಶ್ ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. 


ಪುಸ್ತಕಕ್ಕಾಗಿ ಸಂಪರ್ಕಿಸಿ - 7795739058


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top