ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿ ನೂತನ ಸಭಾಭವನದ ಶಿಲಾನ್ಯಾಸ

Upayuktha
0


ಕುಂಬಳೆ: ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು 24 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಪ್ರಯುಕ್ತ ಶಾಲೆಯ ನೂತನ ಸಭಾಭವನದ ಕಟ್ಟಡಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವು ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ನೇತೃತ್ವದಲ್ಲಿ ಜರಗಿತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಶಿಲಾನ್ಯಾಸ ನೆರವೇರಿಸಿದ ಕೆ.ಕೆ ಶೆಟ್ಟಿ ಉದ್ಯಮಿಗಳು ಹಾಗೂ ಆಡಳಿತ ಮೊಕ್ತೇಸರರು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಳ್ಳ, ಇವರು ಮಾತನಾಡುತ್ತಾ, ದೇವಾಲಯ ಮತ್ತು ವಿದ್ಯಾಲಯ ಇವೆರಡೂ ಸಮಾಜಕ್ಕೆ ಅತ್ಯಂತ ಪವಿತ್ರ, ವಿದ್ಯಾಲಯದಲ್ಲಿ ನಾವು ವಿದ್ಯಾರ್ಥಿಗಳ ರೂಪದಲ್ಲಿ ಪ್ರತ್ಯಕ್ಷ ದೇವರನ್ನು ಕಾಣಬಹುದು  ಎಂದರಲ್ಲದೆ, ಈ ವಿದ್ಯಾಸಂಸ್ಥೆಗೆ ತಮ್ಮ ಸಹಕಾರ ಮತ್ತು ಬೆಂಬಲ ಸದಾ ಇರಲಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಹಾಗೂ ರಜತೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಹಿಸಿ ಎಲ್ಲರ ಸಹಕಾರವನ್ನು ಬಯಸಿದರು. ಈ ಶುಭಾವಸರದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಅಧ್ಯಕ್ಷ ಕೃಷ್ಣ ಮೂರ್ತಿ ಮಾಡಾವು, ಹವ್ಯಕ ಅಭ್ಯುದಯ ಟ್ರಸ್ಟ್ ಪ್ರಾರಂಭಿಕ ಸದಸ್ಯ ಹೆಚ್ ಶಿವರಾಮ ಭಟ್ ಕಾರಿಂಜ ಹಳೆಮನೆ, ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ, ಡಾ. ಡಿ.ಪಿ ಭಟ್ ಕುಂಬಳೆ ಅಧ್ಯಕ್ಷರು ಕುಂಬಳೆ ವಲಯ, ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಕಾರ್ಯದರ್ಶಿಗಳು ಮುಳ್ಳೇರಿಯಾ ಹವ್ಯಕಮಂಡಲ ಉಪಸ್ಥಿತರಿದ್ದು ಶುಭ ಹಾರೈಸಿದರು.


ಶಾಲಾ ಮುಖ್ಯ ಶಿಕ್ಷಕರಾದ ಶಾಮ್ ಭಟ್ ದರ್ಬೆ ಮಾರ್ಗ, ವಿದ್ಯಾಲಯದ ರಜತೋತ್ಸವ ವರ್ಷದ ಕಾರ್ಯಯೋಜನೆಗಳ ಬಗ್ಗೆ  ಪ್ರಾಸ್ತಾವಿಕ ನುಡಿಗಳ ಮೂಲಕ ಪ್ರಸ್ತುತ ಪಡಿಸಿದರು.  ಆಡಳಿತ ಸಮಿತಿ ಪದಾಧಿಕಾರಿಗಳು, ರಜತೋತ್ಸವ ಸಮಿತಿ ಪದಾಧಿಕಾರಿಗಳು, ಶಿಕ್ಷಕವೃಂದ ಹಾಗೂ ರಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವೀಗೊಳಿಸಿದರು.


ಶಾಲಾ ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಗಳಾದ ಬಾಲಕೃಷ್ಣ ಶರ್ಮ ಅನಂತಪುರ ಸ್ವಾಗತಿಸಿ, ರಜತೋತ್ಸವ ಸಮಿತಿಯ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ ಧನ್ಯವಾದ ಸಮರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top