ಕಾರ್ಕಳ: ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಡಿಯಲ್ಲಿ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ 'ಯಕ್ಷಗವಿಷ್ಟಿ' ಯನ್ನು ಏಪ್ರಿಲ್ 12 ರಂದು ನಿಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ಘಂಟೆಗೆ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ವಾಸುದೇವ ರಂಗ ಭಟ್ಟ ಅವರು ಈ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಸಂಸ್ಥೆಯ ಪರಿಸರದ ಐದು ಕಾಲೇಜಿನ ಕಲಾವಿದರು “ರತ್ನಾವತಿ ಕಲ್ಯಾಣ” ಪ್ರಸಂಗವನ್ನು ಸ್ಪರ್ಧೆಯ ಅಂಗವಾಗಿ ಆಡಿತೋರಿಸಲಿರುವರು. ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರು ತೆಂಕು ಮತ್ತು ಬಡಗು ಯಕ್ಷಗಾನ ಪ್ರದರ್ಶನವನ್ನು ನಡೆಸಿಕೊಡಲಿರುವರು.
ಇತ್ತೀಚಿನ ದಿನಗಳಲ್ಲಿ, ಯಕ್ಷಗಾನ ಸ್ಪರ್ಧೆಯಲ್ಲಿ ಎಲ್ಲಾ ತಂಡಗಳು ಒಂದೇ ಪ್ರಸಂಗವನ್ನು ಪ್ರದರ್ಶಿಸುವ ಅಪರೂಪದ ನಿಯಮವನ್ನು ಒಳಗೊಂಡ ವಿಶಿಷ್ಟ ಕಾರ್ಯಕ್ರಮವಿದಾಗಿದ್ದು ನೋಂದಣಿ ಮತ್ತು ಮೌಲ್ಯಮಾಪನಗಳು ಕಾಗದ ರಹಿತವಾಗಿ, ಅಂತರ್ಜಾಲಾಧರಿತವಾಗಿ ನಡೆಯಲಿದೆ. ಈ ಮೂಲಕ ಪರಂಪರೆ ಮತ್ತು ತಂತ್ರಜ್ಞಾನದ ಅಪೂರ್ವ ಸಮ್ಮಿಲನಕ್ಕೆ ಈ ಯಕ್ಷಗವಿಷ್ಟಿ ವೇದಿಕೆಯಾಗಲಿದೆ.
ತಂಡಗಳ ಏಕ ಪ್ರಸಂಗದ ತೀವ್ರ ಪೈಪೋಟಿಯ ಪಂಥಕ್ಕೆ ಸಾಕ್ಷಿಯಾಗಲು ಸರ್ವರನ್ನೂ ಆದರಪೂರ್ವಕ ಆಮಂತ್ರಿಸುತ್ತೇವೆ ಎಂದು ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ