ಬಂಟ್ವಾಳ: ವಿಕಾಸಂ ಸೇವಾ ಫೌಂಡೇಶನ್, ಸಕ್ಷಮ ದ.ಕ. ಜಿಲ್ಲಾ ಘಟಕ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳದ ಸಂಯೋಜನೆಯೊಂದಿಗೆ ಸ್ಥಳೀಯ ಲಯನ್ಸ್ ಸೇವಾ ಮಂದಿರದಲ್ಲಿ ಇಂದು (ಏ.2) ಬೆಳಿಗ್ಗೆ ವಿಶ್ವ ಆಟಿಸಂ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಆಟಿಸಂ ಬಗ್ಗೆ ಬೀದಿನಾಟಕವನ್ನು ಪ್ರದರ್ಶಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ವಿಕಾಸಂ ಸಂಸ್ಥೆಯ ನಿರ್ದೇಶಕ ಧರ್ಮ ಪ್ರಸಾದ್ ರೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕರಾದ ಗಣೇಶ ಭಟ್ಟ ವಾರಣಾಸಿ ಪ್ರಸ್ತಾವನೆಯ ಮೂಲಕ ಕಾರ್ಯಕ್ರಮದ ಉದ್ದೇಶ ವನ್ನು ತಿಳಿಸಿದರು. ದೀಪ ಪ್ರಜ್ವಲನೆಯೊಂದಿಗೆ ಸಭೆ ಮುನ್ನಡೆಯಿತು.
ಬಂಟ್ವಾಳ ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಿಸ್ವಾರ್ಥವಾಗಿ ನಿಃಶುಲ್ಕದೊಂದಿಗೆ ಕೆಲಸ ಮಾಡುತ್ತಿರುವ ವಿಕಾಸ ಸಂಸ್ಥೆಯೊಂದಿಗೆ ಸಹಕರಿಸುವುದಾಗಿ ತಿಳಿಸಿ, ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಝೋನಲ್ ಕಮಿಷನರ್ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಬಂಟ್ವಾಳ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಶ್ರೀಮತಿ ರೇಖಾ ಜೆ ಶೆಟ್ಟಿಯವರು ಮಾತನಾಡುತ್ತಾ, ಇಂದು ಸರಕಾರದ ಮಟ್ಟದಲ್ಲಿ ವಿಶೇಷ ಚೇತನರಿಗೆ ಅನುದಾನವನ್ನು ಕಾದಿರಿಸಬೇಕಾಗಿದೆ. ಇದಕ್ಕಾಗಿ ಜನಪ್ರತಿನಿದಿಗಳು ಹಾಗು ಸರಕಾರಿ ಅಧಿಕಾರಿಗಳು ಈ ವಿಷಯದ ಅರಿವು ಪಡೆದುಕೊಳ್ಳಬೇಕು ವಿಶೇಷ ಚೇತನ ಮಕ್ಕಳ ಗುರುತಿಸವಿಕೆ ಪ್ರಾಥಮಿಕ ಹಂತದಲ್ಲೇ ಆಗಬೇಕಾಗಿದೆ ಶಿಕ್ಷಕರಾದವರು ತರಗತಿಯಲ್ಲಿ ಇತರ ಮಕ್ಕಳೊಂದಿಗೆ ತಾರತಮ್ಯ ಮಾಡಬಾರದು ಎಂದು ಹೇಳಿದರು.
ಬಂಟ್ವಾಳ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಓ ಶ್ರೀಮತಿ ಮಮ್ತಾಝ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು, ಅಂಗನವಾಡಿ ಇಲಾಖೆಯವರು, ಅಂಗನವಾಡಿ ಕಾರ್ಯಕರ್ತೆಯರು, ದಿವ್ಯಾಂಗ ಮಕ್ಕಳನ್ನು ಗುರುತಿಸುವಲ್ಲಿ ಹೇಗೆ ಸಹಕರಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದರು. ಮಕ್ಕಳಿಗೆ ಸಂಬಂಧ ಪಟ್ಟ ವಿಷಯದಲ್ಲಿ ತಡ ಮಾಡುವುದು ಸರಿಯಲ್ಲ, ಚಿಕಿತ್ಸೆ ನೆರವು ಹಾಗೂ ಮಕ್ಕಳ ಸಿಗಬೇಕಾದ ಸವಲತ್ತುಗಳನ್ನು ತಕ್ಷಣ ಒದಗಿಸುವುದು ಎಲ್ಲರ ಜವಾಬ್ದಾರಿ. ಮಕ್ಕಳ ಕುರಿತು ಗಮನಕೊಟ್ಟರೆ ದೇಶಕ್ಕೆ ಒಳಿತು ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯ ಪ್ರಾಂಶುಪಾಲರೂ ಸಾಹಿತಿಗಳೂ ಆಗಿರುವ ಡಾ. ಅಜಕ್ಕಳ ಗಿರೀಶ ಭಟ್ಟರು ಉದ್ಘಾಟನಾ ಕಾರ್ಯ ನಡೆಸಿ ತಾನೂ ಜನಜಾಗೃತಿ ಮೂಡಿಸುವ ಇಂತಹ ಕಾರ್ಯಗಳಿಗೆ ಕೈಜೋಡಿಸುವುದಾಗಿ ಹೇಳಿ ಶ್ಲಾಘಿಸಿದರು. ಆಟಿಸಂ ಕುರಿತು ಸಾಮಾಜಿಕವಾಗಿ ಅರಿವು ಮೂಡಿಸುವದು ಅತಿ ಅಗತ್ಯ ಸಮಾಜ ಆಟಿಸಂ ಮಕ್ಕಳೊಂದಿಗೆ ಬೆರೆಯಬೇಕು ಸಮಾಜದಲ್ಲಿ ಬಲಹೀನರಿಗೂ ಅವಕಾಶ ದೊರಕಿಸಿ ಮುಖ್ಯ ವಾಹಿನಿಗೆ ತರುವುದು ಇಂದಿನ ಅಗತ್ಯ ಎಂದರು.
ಸಕ್ಷಮ ದಕ ಜಿಲ್ಲಾ ಘಟಕಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆಯವರು, ದಿವ್ಯಾಂಗ ಮಕ್ಕಳ ಸಬಲೀಕರಣಕ್ಕೆ ಮಕ್ಕಳು, ಪೋಷಕರು, ಶಿಕ್ಷಕರು ಹೇಗೆ, ಯಾಕೆ ಸಮಾಜದಲ್ಲಿ ಅರಿವನ್ನು ಮೂಡಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಸರಕಾರ ವಿಶೇಷ ಚೇತನ ಮಕ್ಕಳಿಗೆ ಸವಲತ್ತುಗಳನ್ನು ನೀಡಲು ವಿಳಂಬಿಸಬಾರದು ಎಂದರು.
ವೇದಿಕೆಯಲ್ಲಿದ್ದ ಸರಕಾರಿ ಪ್ರಥಮದರ್ಜೆ ಕಾಲೇಜು ವಿಟ್ಲದ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರಸನ್ನ ಕುಮಾರ್, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವಿನ ಸಮಾಜಕಾರ್ಯ ಪದವಿ ವಿಭಾಗದ ಸಹಪ್ರಾಧ್ಯಾಪಕ ಉದಯಕುಮಾರ್ ಸಿ ಆರ್ ಶುಭ ಹಾರೈಸಿದರು.
ವಿಕಾಸಂ ಸೇವಾ ಫೌಂಡೇಶನ್ನಿನ ಸ್ಥಾಪಕ ನಿರ್ದೇಶಕ ರಲ್ಲೊಬ್ಬರಾದ ಧರ್ಮ ಪ್ರಸಾದ್ ರೈ ಯವರು ಸಂಸ್ಥೆಯ ದಿವ್ಯಾಂಗ ಮಕ್ಕಳು ತಯಾರಿಸಿದ ಚಿತ್ರ ವನ್ನು ವೇದಿಕೆ ಯಲ್ಲಿದ್ದ ಗಣ್ಯರಿಗೆ ವಿತರಿಸಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಸಕ್ಷಮ ದಕ ಜಿಲ್ಲಾ ಘಟಕದಿಂದ ಒಂದು ಲರ್ನಿಂಗ್ ಏಡ್ ಕಿಟ್ಟನ್ನು ವಿಕಾಸಂ ಸೇವಾ ಫೌಂಡೇಶನ್ನಿನ ನಿರ್ದೇಶಕ ಹಾಗೂ ಕಾರ್ಯ ನಿರ್ವಾಹಕರಿಗೆ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಸೇರಿದ ವಿಧ್ಯಾರ್ಥಿ ಮತ್ತು ಶಿಕ್ಷಕ ವೃಂದಕ್ಕೆ ಆಟಿಸಂ ಮತ್ತು 21ಬಗೆಯ ದಿವ್ಯಾಂಗತಯ ಬಗ್ಗೆ ಮಾಹಿತಿ ಶಿಬಿರವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 175 MSW ಮತ್ತು B.Ed ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಕಾಸಂ ಸೇವಾ ಫೌಂಡೇಶನ್ ಬಂಟ್ವಾಳದ ಆಡಳಿತ ನಿರ್ದೇಶಕರೂ ಸಂಪನ್ಮೂಲ ವ್ಯಕ್ತಿ ಗಳೂ ಆದ ವಾರಣಾಸಿ ಗಣೇಶ ಭಟ್ಟರು "ಆಟಿಸಂ"ಬಗ್ಗೆ ಮಾಹಿತಿ ಹಂಚಿಕೊಂಡರು. ಬಳಿಕ "ಸಕ್ಷಮ" ದ.ಕ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆಯವರು ಸರಕಾರದಿಂದ ಗುರುತಿಸಲ್ಪಟ್ಟ 21 ಬಗೆಯ ದಿವ್ಯಾಂಗತೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ವಾಮದಪದವು ಮತ್ತು ವಿಟ್ಲ ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸಂತ ಅಲೋಶಿಯಸ್ ಬಿ.ಎಡ್ ಮತ್ತು ಎಂ.ಎಸ್ ಡಬ್ಲ್ಯೂ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶಿಕ್ಷಕರು ಕಾರ್ಯಕ್ರಮದ ಫಲಾನುಭವಿಗಳಾಗಿದ್ದರು.
ಸಕ್ಷಮ ದ.ಕ ಜಿಲ್ಲಾ ಘಟಕದ ಕಾರ್ಯ ದರ್ಶಿ ಹರೀಶ್ ಪ್ರಭು, ಕೋಶಾಧಿಕಾರಿ ಸತೀಶ್ ರಾವ್, ಮಹಿಳಾ ವಿಭಾಗದ ಗೀತಾ ಲಕ್ಷ್ಮೀಶ್, ಸಹಕಾರ್ಯದರ್ಶಿ ಭಾಸ್ಕರ ಹೊಸಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ