ವಕ್ಫ್‌ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಧ್ಯರಾತ್ರಿ ಅಂಗೀಕಾರ

Upayuktha
0


ಹೊಸದಿಲ್ಲಿ: ಸುದೀರ್ಘ ಚರ್ಚೆಯ ಬಳಿಕ ವಕ್ಫ್‌ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಬುಧವಾರ ಮಧ್ಯರಾತ್ರಿ ಅಂಗೀಕಾರಗೊಂಡಿದೆ. ವಿವಾದಿತ ಮಸೂದೆ ಕುರಿತು ಸಂಸತ್‌ನಲ್ಲಿ 12 ಗಂಟೆ ಚರ್ಚೆ ನಡೆದ ಬಳಿಕ 2 ಗಂಟೆ ಮತದಾನ ನಡೆಯಿತು. ಮಧ್ಯರಾತ್ರಿ 2 ಗಂಟೆಗೆ ಮಸೂದೆಯನ್ನು ಸದನ ಅಂಗೀಕರಿಸಿದೆ.


ಮಸೂದೆ ಪರ 288 ಹಾಗೂ ಮಸೂದೆ ವಿರುದ್ಧ 232 ಮತಗಳು ಬಂದಿವೆ. ಮಸೂದೆಯನ್ನು ಮತಕ್ಕೆ ಹಾಕುವ ಮೊದಲು ಇಡೀ ದಿನ ಚರ್ಚೆ ನಡೆಯಿತು. ಮಸೂದೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆದಿದ್ದು,  ಮುಸ್ಲಿಮರ ಹಕ್ಕು ಕಸಿ ಯುವ ಯತ್ನ ಎಂದು ಪ್ರತಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಂಡಿತು.


ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಇಂದು (ಗುರುವಾರ) ರಾಜ್ಯಸಭೆಯಲ್ಲೂ ಮಂಡನೆಯಾಗಲಿದೆ. ಇಲ್ಲೂ ಸುದೀರ್ಘ ಚರ್ಚೆ ನಡೆದ ಬಳಿಕ ಮತದಾನ ನಡೆಯಲಿದೆ. ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರಗೊಂಡರೆ ರಾಷ್ಟ್ರಪತಿಗಳ ಸಹಿಗಾಗಿ ಅವರ ಕಚೇರಿಗೆ ಹೋಗಲಿದೆ. ರಾಷ್ಟ್ರಪತಿಗಳು ಸಹಿ ಮಾಡಿದ ಬಳಿಕ ಮಸೂದೆ ಕಾನೂನು ಆಗುವುದು. 236 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 119 ಮತಗಳು ಬೇಕು. ಎನ್‌ಡಿಎ 125 ಸದಸ್ಯರನ್ನು ಹೊಂದಿದೆ. ಹೀಗಾಗಿ ಅಲ್ಲಿಯೂ ಮಸೂದೆ ಅಂಗೀಕಾರವಾಗುವ ಅವಕಾಶ ನಿಚ್ಚಳವಾಗಿದೆ.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top