ಪುತ್ತೂರು: ಇಲ್ಲಿನ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ವಿವೇಕಾನಂದ ಕಾಲೇಜಿನ ಯಕ್ಷರಂಜಿನಿ ತಂಡದ ವಿದ್ಯಾರ್ಥಿಗಳು ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಫರ್ಧೆ ‘ಯಕ್ಷಯಾನ 2025’ ರಲ್ಲಿ ಬಬ್ರುವಾಹನ ಕಾಳಗ ಎನ್ನುವ ಪ್ರಸಂಗ ಪ್ರಸ್ತುತಪಡಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಜೊತೆಗೆ ಕಿರೀಟ ವೇಷದಲ್ಲಿ ಭವಿಷ್ ಭಂಡಾರಿಗೆ ಪ್ರಥಮ ಬಹುಮಾನ ಹಾಗೂ ಸ್ತ್ರೀ ವೇಷ ವಿಭಾಗದಲ್ಲಿ ಭಾಗ್ಯಶ್ರೀ ತೃತೀಯ ಬಹುಮಾನ ಗಳಿಸಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸ ಕೇತರ ವೃಂದದವರು ಅಭಿನಂದಿಸಿದ್ದಾರೆ. ಕಾಲೇಜಿನ ಯಕ್ಷರಂಜಿನಿಯ ಸಂಯೋಜಕ ಗೋವಿಂದ ಶರ್ಮಾ ಸಹಕರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ