ಅಡಮಾನ ಸಹಿತ ಸಾಲ ಖಾತೆಯಲ್ಲಿ 50% ಪ್ರಗತಿ ನಿರೀಕ್ಷಿಸಿದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

Upayuktha
0


ಉಡುಪಿ: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಉಜ್ಜೀವನ್) ಉತ್ತಮ ಪ್ರಗತಿಯ ಪಥದಲ್ಲಿದ್ದು, ವೈವಿಧ್ಯಮಯ ಅಡಮಾನ ಸಹಿತ ಸ್ವತ್ತು ಪೋರ್ಟ್‌ಫೋಲಿಯೋ ಮತ್ತು ಸಮತೋಲಿನ ಸಾಲ ಮಿಶ್ರಣದ ಕಡೆಗೆ ಬದಲಾವಣೆಯಿಂದ ಇದು ಸಾಧ್ಯವಾಗಿದೆ. 


ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂಜೀವ್ ನೌಟಿಯಾಲ್  ಮಾತನಾಡುತ್ತಾ, "ಪ್ರಸ್ತುತ ತ್ರೈಮಾಸಿಕದಲ್ಲಿ, ಕಡಿಮೆ ದರದ ವಸತಿ, ಸಣ್ಣ ಅಡಮಾನಗಳು, ಎಂಎಸ್ಎಂಇ, ವಾಹನ ಸಾಲ, ಚಿನ್ನದ ಸಾಲ ಮತ್ತು ಕೃಷಿ ಸಾಲವು ನಮ್ಮ ಅಡಮಾನ ಸಹಿತ ಸ್ವತ್ತು ಪೋರ್ಟ್ಫೋಲಿಯೋದಲ್ಲಿ ಬೆಳವಣಿಗೆಯನ್ನು ಪ್ರೋತ್ಸಾಹಿಸಿವೆ. ವಾರ್ಷಿಕವಾಗಿ ನಮ್ಮ ಖಾತೆಯನ್ನು 50% ಬೆಳವಣಿಗೆ ಸಾಧಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಗುರಿಗೆ ಅನುಗುಣವಾಗಿ, ನಮೂದಿಸಿದ ಸೆಗ್ಮೆಂಟ್ಗಳಲ್ಲಿ ವೈವಿಧ್ಯಮಯ ಅಡಮಾನ ಸಹಿತ ಸಾಲದ ಪೋರ್ಟ್ಫೋಲಿಯೋದ ಮೇಲೆ ಬ್ಯಾಂಕ್ ಹೆಚ್ಚು ಗಮನ ಕೇಂದ್ರೀಕರಿಸಿದೆ. ಅಂದರೆ, ಕಡಿಮೆ ದರದ ವಸತಿ, ಎಂಎಸ್ಎಂಇ, ವಾಹನ ಸಾಲಗಳು, ಕೃಷಿ ಸಾಲಗಳು, ಚಿನ್ನದ ಸಾಲ ಮತ್ತು ಅತಿ ಸಣ್ಣ ಅಡಮಾನಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿದ್ದು, ವಾರ್ಷಿಕವಾಗಿ 52% ಏರಿಕೆಯೊಂದಿಗೆ ವರ್ಷದಲ್ಲಿ ಈ ದಿನದವರೆಗೆ 33% ಬೆಳವಣಿಗೆ ಸಾಧಿಸಲಾಗಿದೆ" ಎಂದು ಹೇಳಿದ್ದಾರೆ.


ಡಿಜಿಟಲ್ ವಿಸ್ತರಣೆ ಕಾರ್ಯಯೋಜನೆಗೆ ಅನುಗುಣವಾಗಿ, ತನ್ನ ಗ್ರಾಹಕರಿಗೆ ಡಿಜಿಟಲ್ ಚಾಲ್ತಿ ಖಾತೆಯನ್ನು ಉಜ್ಜೀವನ್ ಪರಿಚಯಿಸಿದೆ. ಈಗಾಗಲೇ ಡಿಜಿಟಲ್ ಉಳಿತಾಯ ಖಾತೆ ಮತ್ತು ಡಿಜಿಟಲ್ ಸ್ಥಿರ ಠೇವಣಿಗಳನ್ನು ಬ್ಯಾಂಕ್ ಹೊಂದಿದೆ. ಅಲ್ಲದೆ, ಯುಪಿಐ ಆಪ್ ಆಗಿರುವ ಉಜ್ಜೀವನ್ ಪೇ ಅನ್ನೂ ಬಿಡುಗಡೆ ಮಾಡುವುದರಲ್ಲಿದೆ. ಇದು ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top