ಯುಪಿಎಸ್‌ಸಿ - ಎನ್‌ಡಿಎ ಪರೀಕ್ಷೆ: ಆಳ್ವಾಸ್ ನ 25 ವಿದ್ಯಾರ್ಥಿಗಳು ಉತ್ತೀರ್ಣ

Upayuktha
0




ಮೂಡಬಿದಿರೆ:  ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಮೂಲಕ 2025ರ ಎಪ್ರಿಲ್‌ನಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 25 ವಿದ್ಯಾರ್ಥಿಗಳು ತೇರ್ಗಡೆಯಾಗಿ, ರಾಷ್ಟ್ರದ ಗಮನವನ್ನು ಆಳ್ವಾಸ್ ಕಾಲೇಜಿನೆಡೆಗೆ ಸೆಳೆದಿದ್ದಾರೆ. 

ಬಾಬು ಸಿದ್ದಲಿಂಗಪ್ಪ ಗೌರೀ, ಬಸವರಾಜ ಕರೆಪ್ಪ ಪೂಜೇರಿ, ಪುನೀತ್ ಕುಮಾರ್ ಬಿಜಿ, ಸಿದ್ಧಾಂತ್ ಎಸ್ ಮಠಪತಿ,  ಆದಿತ್ಯ, ನಿಖಿಲ್ ಭಾಸ್ಕರ್ ಭಟ್, ಆಕಾಶ್ ಪೂಜಾರ್, ಕೇಶವ ಬೂಬ್, ರೋಷನ್, ವೈಭವ್ ಪಿವಿ, ಮೋಹಿತ್ ಕುಮಾರ್, ಪ್ರಣವ್ ವಿ ಪಂಡಿತ್, ಅಕ್ಷಯ್ ಭಾರದ್ವಾಜ್, ಅನುಷ್ ಅರುಣ್, ಪಿಯೂಷ್ ಹೆಚ್, ವಿಸ್ಮಯ ನಾರಾಯಣ್, ಮೆಲ್ರೊಯ್ ಕ್ಯಾಸ್ಟೆಲಿನೊ, ಇಶಾನ್, ಪುನರ್ವ, ಸುಮನ್ ಭಟ್, ದುಷ್ಯಂತ್, ಅಖಿಲ್ ಜೆ.ಎಚ್, ವಿಶ್ವವಿಜಿತ್, ದಿಗಂತ್ ಮತ್ತು ಅಭಿಷೇಕ್ ಜೋಗಿ, ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.


ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ)  ಮೂಲಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ರಾಷ್ಟೀಯ  ರಕ್ಷಣಾ ಅಕಾಡೆಮಿ- ಎನ್‌ಡಿಎ)  ಮತ್ತು ಇಂಡಿಯನ್ ನೇವಲ್ ಅಕಾಡೆಮಿ (ಭಾರತೀಯ ನೌಕಾ ಅಕಾಡೆಮಿ- ಐಎನ್‌ಎ) ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ನಡೆಸುವ ಪ್ರವೇಶ ಪರೀಕ್ಷೆಯಾಗಿದೆ.  ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಹಕಾರಿಯಾಗಿದೆ.


ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 72 ವಿದ್ಯಾರ್ಥಿಗಳು ಆಳ್ವಾಸ್‌ನಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಗಾಗಿ ತರಬೇತಿಯನ್ನು ಪಡೆದುಕೊಂಡಿದ್ದರು. ಎನ್‌ಡಿಎ ಪರೀಕ್ಷೆ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top