ನಾಳೆ ಅಕ್ಷಯ ತೃತೀಯ.. ಎಲ್ಲರಿಗೂ ಶುಭ ತರಲಿ

Upayuktha
0



ಏ -30 ರಂದು ಬಸವೇಶ್ವರ ಜಯಂತಿ ಮತ್ತು ಅಕ್ಷಯ ತೃತೀಯ ದಿನ. ಶುಭಕಾರ್ಯಗಳಿಗೆ ಶುಭ ಹಾಡುವ ಶುಭದಿನ ಅಕ್ಷಯ ತೃತೀಯ ಮತ್ತು ಅಕ್ಷಯ ತದಿಗೆಯನ್ನು ಸಡಗರದಿಂದ ಆಚರಿಸಲು ಚಿನ್ನದಂಗಡಿಗಳು ಶೃಂಗಾರಗೊಂಡಿವೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಗ್ರಾಹಕರು ಕೊಳ್ಳಲು ಮುಂದಾಗುವುದು ಸಾಮಾನ್ಯವಾಗಿ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳು ಮನೆಯಲ್ಲಿ ಚಿನ್ನದ ಆಭರಣದ  ಪೆಟ್ಟಿಗೆ ತೆರೆದು ನೋಡಿದರೂ ಸಮಾಧಾನವಿಲ್ಲ. ಇನ್ನಷ್ಟು ಒಡವೆಗಳನ್ನು ಖರೀದಿಸುವ ಆಸೆ. ಪ್ರತಿ ವರ್ಷ ಅಕ್ಷಯ ತೃತೀಯದ ದಿನ ಖರೀದಿಸಿದ ಚಿನ್ನದ ಒಡವೆಗಳೆಲ್ಲ. ರಾಶಿ ರಾಶಿಯಾಗಿ ಪೆಟ್ಟಿಗೆಯಲ್ಲಿವೆ. ಈ ವರ್ಷವೂ ಯಾವುದೋ ಒಂದು ಚಿನ್ನದ ಆಭರಣ ಖರೀದಿಸಿ ಆ ಪೆಟ್ಟಿಗೆಯಲ್ಲಿ ಸೇರಿಸಿಟ್ಟರೆ ಸಮಾಧಾನ. 
 

ಅಕ್ಷಯ ತೃತೀಯದಂದು ಚಿನ್ನಾಭರಣ ವಾಹನ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿದರೆ. ಅದೃಷ್ಟ ದೊರೆಯುತ್ತದೆ. ಮತ್ತಷ್ಟು ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಯೋಗ ಬರುತ್ತದೆ. ಈ ದಿನದಂದು ಯಾವುದೇ ಶುಭ ಕಾರ್ಯಕ್ರಮ ಆರಂಭಿಸಿದರೂ ಅದರಲ್ಲಿ ಸಂಪೂರ್ಣ ಯಶಸ್ಸು ಸಿಗುತ್ತದೆ ಎಂದು ಜನರು ನಂಬುತ್ತಾರೆ. ಈ ದಿನ ಪೂಜೆ ಪುನಸ್ಕಾರಗಳು ವೃತದಾನ, ಧರ್ಮ ಮಾಡಿದರೆ ಪುಣ್ಯಲಭಿಸುತ್ತದೆ. ಅಕ್ಕ-ಪಕ್ಕದ ಮನೆಯವರಿಗೆ ಅರಿಶಿನ, ಕುಂಕಮ ತಾಂಬೂಲ ಕೊಡುತ್ತಾರೆ. ಗೋವಿಗೆ ಪೂಜೆ ಮಾಡಿ ಬಾಳೆ ಎಲೆಯಲ್ಲಿ ಸಿಹಿ ತಿನಿಸಿದರೆ ವಿವಾಹ ದೋಷಗಳು ಪರಿಹಾರವಾಗುವುದಾಗಿ ನಂಬಿಕೆ ಇದೆ. ಹೀಗಾಗಿ ದಾನ ಧರ್ಮ ನೀಡುವ ಮೂಲಕ ಈ ಅಕ್ಷಯ ತೃತೀಯ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಾರೆ. 

ಆಭರಣ ಕೊಳ್ಳುವಾಗ ಶೋರೂಮ್ ನಲ್ಲಿ ಹಾಲ್ ಮಾರ್ಕ್‌ ಇರುವ ಚಿನ್ನವನ್ನೇ ಖರೀದಿಸಿ, ಒಡವೆ ತೂಕದ ಎಲೆಕ್ಟ್ರಾನಿಕ್ ಯಂತ್ರದ ಬಗ್ಗೆ ನಿಗಾ ವಹಿಸಿ .


 - ವಿ.ಎಂ.ಎಸ್.ಗೋಪಿ, ಬೆಂಗಳೂರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top