ಒಂದು ಮರ ಈ ಪ್ರಪಂಚದ ಆಶ್ಚರ್ಯವೇ ಸರಿ. ಮರವು ನಮಗೆ ಉಸಿರಾಡಲು ಒಳ್ಳೆಯ ಗಾಳಿಯನ್ನು ಕೊಡುತ್ತದೆ. ಮನೆಯಲ್ಲಿ ಅಡುಗೆ ಮಾಡಲು ಸೌದೆಯನ್ನು ಕೊಡುತ್ತದೆ. ನಮ್ಮ ಪರಿಸರವನ್ನು ಸ್ವಚ್ಛಗೊಳಿಸುತ್ತದೆ. ನಮ್ಮ ಸುತ್ತಮುತ್ತಲ ಪರಿಸರಕ್ಕೆ ಸೌಂದರ್ಯವನ್ನು ನೀಡುತ್ತದೆ. ನಮಗೆ ತಿನ್ನಲು ಒಳ್ಳೆಯ ಹಣ್ಣುಗಳನ್ನು ಕೊಡುತ್ತದೆ. ಮರಗಳು ಪಕ್ಷಿಗಳಿಗೆ ಗೂಡುಗಳನ್ನು ಕಟ್ಟಿಕೊಳ್ಳಲು ಸ್ಥಳವನ್ನು ನೀಡುತ್ತದೆ. ಮನೆಗಳನ್ನು ಕಟ್ಟಿಕೊಳ್ಳಲು ಮರವು ನಮಗೆ ಸಹಾಯ ಮಾಡುತ್ತದೆ. ಮಳೆಯನ್ನು ಆಕರ್ಷಿಸುತ್ತದೆ. ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ. ಮರದ ಬೇರು ಮೇಲ್ಪದರದ ಮಣ್ಣು ಕೊಚ್ಚಿ ಹೋಗದಂತೆ ಗಟ್ಟಿಯಾಗಿ ಹಿಡಿದಿರುತ್ತದೆ. ತಂಪಾದ ನೆರಳನ್ನು ಕೊಡುತ್ತದೆ.
ಆ ನೆರಳಿನಲ್ಲಿ ನಾವು ವಿಶ್ರಮಿಸಿಕೊಳ್ಳಬಹುದು. ಮರಗಳು ನಮಗೆ ಆಹಾರ, ಹಣ್ಣು ಹಂಪಲು, ಔಷಧಿ, ಕಾಗದ ಮುಂತಾದ ವಸ್ತುಗಳನ್ನು ಕೊಡುತ್ತದೆ. ರಾಶಿ ರಾಶಿ ಮರಗಳು ಒಟ್ಟಿಗೆ ಇದ್ದರೆ ಆ ಪ್ರವೇಶವನ್ನು ನಾವು ಕಾಡು ಎಂದು ಕರೆಯುತ್ತೇವೆ. ಮರಗಳಿಲ್ಲದೆ ಮನುಷ್ಯನಿಲ್ಲ ಮನುಷ್ಯನಿಲ್ಲದಿದ್ದರೂ ಮರಗಳು ಇರುತ್ತವೆ. ಅಂದರೆ ಮನುಷ್ಯನಿಗೆ ಮರಗಳು ಬಹಳ ಮುಖ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಆದ್ದರಿಂದ ನಾವು ಮರಗಳನ್ನು ಕಡಿಯಬಾರದು. ಒಂದು ವೇಳೆ ಮರವನ್ನು ಕಡಿದರೂ ಆ ಜಾಗದಲ್ಲಿ ಒಂದು ಸಸಿಯನ್ನು ನೆಡಬೇಕು. ನೀರು ಹಾಕಿ ಬೆಳೆಸಬೇಕು. ನಮ್ಮ ಒಳ್ಳೆಯ ಭವಿಷ್ಯಕ್ಕೆ ಒಳ್ಳೆಯ ಪರಿಸರವನ್ನು ಕಾಪಾಡಿಕೊಳ್ಳೋಣ.
-ಸಿರಿ. ವಿ. ಸಿ.
3 ನೇ ತರಗತಿ
ಕೆ.ವಿ. ಸ್ಕೂಲ್ ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ