ಸುರತ್ಕಲ್: ಪುಸ್ತಕದಷ್ಟು ನಂಬಿಕಸ್ಥ ಸ್ನೇಹಿತ ಮತ್ತೊಬ್ಬನಿಲ್ಲ, ಜ್ಞಾನಭಂಡಾರವಾಗಿ ಕಲ್ಪನೆಗಳಿಗೆ ರೆಕ್ಕೆಗಳನ್ನು ಮೂಡಿಸುವ ಮಾರ್ಗವಾಗಿ ಪುಸ್ತಕಗಳು ನಮ್ಮ ನಿತ್ಯ ಬದುಕಿನೊಂದಿಗೆ ಬೆರೆತು ಹೋಗಿದೆ, ಪುಸ್ತಕ ಓದುವುದರಿಂದ ಒಂಟಿತನ ಕಾಡಲಾರದು ಎಂದು ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ ಪಿ ಇವರು ವಿಶ್ವ ಪುಸ್ತಕದಿನದ ಅಂಗವಾಗಿ ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ಆಯೋಜಿಸಿದ್ದ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ ನುಡಿದರು.
ಪ್ರಥಮ ಬಿ.ಎ ವಿದ್ಯಾರ್ಥಿನಿ ಹನುಮವ್ವ ಲಕ್ಷ್ಮಣ ಮಾದರ ಇವರು ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ರವರು ಬರೆದ ಬೆರಳ್ಗೆ ಕೊರಳ್ ಎಂಬ ಪುಸ್ತಕವನ್ನು ಪರಿಚಯಿಸಿದರು. ಪ್ರಾಧ್ಯಾಪಕರುಗಳಾದ ಡಾ. ಆಶಾಲತಾ ಪಿ, ಡಾ. ವಿಜಯಲಕ್ಷ್ಮಿ, ವಿನೋದ ಶೆಟ್ಟಿ, ಗ್ರಂಥಪಾಲಕಿ ಡಾ.ಸುಜಾತಾ ಬಿ, ಉಪಸ್ಥಿತರಿದ್ದರು. ಪ್ರಥಮ ಬಿ.ಎ ವಿದ್ಯಾರ್ಥಿನಿ ನಾಗರತ್ನ ಸ್ವಾಗತಿಸಿ ವಂದಿಸಿ ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ