ಮುಖ್ಯ ಅತಿಥಿಯಾಗಿ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರೊ. ಡಾ. ಥೆರೆಜಾ ಮಥಾಯಸ್ ಉಪಸ್ಥಿತರಿದ್ದರು. ಅವರು ವಿದ್ಯಾರ್ಥಿಗಳಿಗೆ ದೀಪ ಬೆಳಗಿಸುವ ಮಹತ್ವವನ್ನು ತಿಳಿಸಿ ಇದು ಜ್ಞಾನ, ಸಮರ್ಪಣೆ ಮತ್ತು ಪಾವಿತ್ರ್ಯದ ಪ್ರತೀಕವಾಗಿದೆ ಎಂದು ಹೇಳಿದರು. ಕೋವಿಡ್-19 ಮಹಾಮಾರಿಯ ಸಮಯದಲ್ಲಿ ಆರೋಗ್ಯ ಸೇವಾ ವೃತ್ತಿದಾರರು ನೀಡಿದ ಅಮೂಲ್ಯ ಸೇವೆ ಯನ್ನು ಅವರು ನೆನಪಿಸಿಕೊಂಡರು.
ಶ್ರೀನಿವಾಸ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ಸ್ ಟ್ರಸ್ಟಿ ಸದಸ್ಯೆ ಎ. ವಿಜಯಲಕ್ಷ್ಮೀ ಆರ್. ರಾವ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳನ್ನು ಸಮಾಜದ ಸೇವೆ ಮಾಡಲು ಹಾಗೂ ರೋಗಿಗಳನ್ನು ಸ್ನೇಹಪೂರ್ವಕವಾಗಿ ಚಿಕಿತ್ಸೆ ನೀಡಲು ಪ್ರೇರೇಪಿಸಿದರು. ಸಹಾನುಭೂತಿ ತುಂಬಿದ ಆರೈಕೆಯು ರೋಗಿಗಳ ಬೇಗನೇ ಗುಣಮುಖರಾಗಲು ಸಹಾಯ ಮಾಡುತ್ತದೆ ಎಂದರು. ನರ್ಸಿಂಗ್ ವೃತ್ತಿಯು ಕೇವಲ ವೈದ್ಯಕೀಯ ತಜ್ಞತೆಯಷ್ಟೇ ಅಲ್ಲ, ರೋಗಿಗಳೆಡೆಗಿನ ಸಹಾನುಭೂತಿ ಹಾಗೂ ಆರೈಕೆಯನ್ನೂ ಒಳಗೊಂಡಿದೆ ಎಂದು ಹೇಳಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ಸ್ ಟ್ರಸ್ಟಿ ಸದಸ್ಯೆ ಪ್ರೊ. ಇಆರ್. ಎ. ಮಿತ್ರಾ ಎಸ್. ರಾವ್ ಮಾತನಾಡಿ, ನರ್ಸಿಂಗ್ ವೃತ್ತಿಯು ರೋಗಿಗಳ ಜೀವನಕ್ಕೆ ಬೆಳಕನ್ನು ತರುತ್ತದೆ. ನಾವು ಕತ್ತಲನ್ನು ಎದುರಿಸಿದಾಗ ಮಾತ್ರ ಬೆಳಕಿನ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತೇವೆ. ರೋಗವೇ ಆ ಕತ್ತಲು, ನರ್ಸಿಂಗ್ ವಿದ್ಯಾರ್ಥಿಗಳು ಆರೈಕೆಯ ಬೆಳಕಾಗಬೇಕು ಎಂದು ಹೇಳಿದರು. ರೋಗಿಗಳ ಆರೈಕೆಯತ್ತ ಗಮನ ಹರಿಸಲು ಪ್ರೇರೇಪಿಸಿ ನರ್ಸಿಂಗ್ ವೃತ್ತಿಯು ಕೌಶಲ್ಯ, ಸಹಾನುಭೂತಿ ಮತ್ತು ನಿಷ್ಠೆ ಬಯಸುತ್ತದೆ ಎಂದು ನೆನಪಿಸಿದರು.
ಪ್ರೊ. ದೀಪಾ ಡೇನಿಯಲ್ ದೀಪ ಬೆಳಗಿಸುವ ಸಮಾರಂಭದ ಮಹತ್ವ ಹಾಗೂ ನರ್ಸಿಂಗ್ ವೃತ್ತಿಯ ಮೌಲ್ಯ ವಿವರಿಸಿದರು. ಶಪಥ ವನ್ನು ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಡೀನ್ ಡಾ. ಜೂಬಿ ಮೇರಿ ಚಾಕೋ ವಾಚಿಸಿದರು ಮತ್ತು ಸ್ವಾಗತಿಸಿದರು. ಅಸೋಸಿಯೇಟ್ ಪ್ರೊಫೆಸರ್ ವರ್ಷಿತಾ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಸಾರಾ ಮತ್ತು ನಯನಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ