ಹಿಂದೆಯೇ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಭೂಮಿಪೂಜೆ- ಶಿಲಾನ್ಯಾಸಗಳನ್ನು ನೆರವೇರಿಸಲ್ಪಟ್ಟ ಪುಣ್ಯ ಭೂಮಿಯಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯ ದೇವಾಲಯದ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಪಲಿಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಹಾಗೂ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅಮೃತ ಹಸ್ತಗಳಿಂದ ಶ್ರೀ ಯೋಗಾಲಕ್ಷ್ಮೀನರಸಿಂಹ ಸ್ವಾಮಿಯ ಪ್ರತಿಷ್ಠಾಪನೆ ಮಿಥುನ ಲಗ್ನದಲ್ಲಿ (ಬೆಳಿಗ್ಗೆ 10.00 ರಿಂದ 10.15) ನೆರವೇರಲಿದೆ. ಅಂತೆಯೇ ಭಕ್ತ ಜನರ ಆಶಯ ಹಾಗೂ ಆಶ್ರಮದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವಭೂಷಣತೀರ್ಥ ಶ್ರೀಪಾದಂಗಳವರ ಬಹುದಿನಗಳ ಸಂಕಲ್ಪವು ಸಾಕಾರಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಸಿಟಿ ಮಾರ್ಕೆಟ್ ನಿಂದ 227 ಸಂಖ್ಯೆಯ ಎಲ್ಲಾ ಬಸ್ ಗಳು (ಸಿ ಮತ್ತು ಡಿ ಹೊರತುಪಡಿಸಿ), ಅಲ್ಲದೇ ನೆಲಮಂಗಲ, ಮೆಜೆಸ್ಟಿಕ್, ಬನಶಂಕರಿ ಹಾಗೂ ಕೆಂಗೆರಿಯಿಂದಲೂ ರಾಮೋಹಳ್ಳಿಗೆ ಬಸ್ ಸೌಲಭ್ಯವಿದೆ. ಇಳಿಯುವ ಸ್ಥಳ: ಶುಭಂ ಕರೋತಿ ಮೈತ್ರೇಯಿ ಗುರುಕುಲ ಆಶ್ರಮ ಸ್ಟಾಪ್. ಪ್ರತಿಷ್ಠಾಪನಾ ದಿನದಂದು ಶುಭಂ ಕರೋತಿ ಸ್ಟಾಪ್ ನಿಂದ ಮಧ್ವನಾರಾಯಣ ಆಶ್ರಮಕ್ಕೆ ಬರಲು ವಾಹನ ಸೌಲಭ್ಯ ಕಲ್ಪಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ