ಶ್ರಾವ್ಯಾ ರಾವ್ ರಂಗಪ್ರವೇಶ ನಾಳೆ

Upayuktha
0




ಬೆಂಗಳೂರು: ನೃತ್ಯ ಗುರು ವಿದುಷಿ ಡಾ. ಪ್ರಿಯಾ ಗಣೇಶ್‌ರವರ ಶಿಷ್ಯೆ ಶ್ರಾವ್ಯಾ ರಾವ್ ರಂಗಪ್ರವೇಶ ಏ. 30ರಂದು ಬುಧವಾರ ಸಂಜೆ 5 ಗಂಟೆಗೆ  ನಗರದ ಕೋರಮಂಗಲದ ಪ್ರಭಾತ್ ಕಲಾದ್ವಾರಕ ಸಭಾಂಗಣದಲ್ಲಿ ಅಯೋಜಿಸಲಾಗಿದೆ. 

6 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಕು.ಶ್ರಾವ್ಯ ಬಾಲ್ಯದಿಂದಲೂ ನಾಟ್ಯ ಕ್ಷೇತ್ರದಲ್ಲಿ ಆಸಕ್ತರು ಖ್ಯಾತ ನೃತ್ಯ ಗುರು ಡಾ. ಪ್ರಿಯಾ ಗಣೇಶ್‌ರವರ ಶಿಷ್ಯೆ ಯಾಗಿ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನುಾಭ್ಯಾಸ ಮಾಡುತ್ತಿದ್ದಾರೆ. ಅಯೋಧ್ಯಾ ರಾಮಮಂದಿರ ಮುಂತಾದ ಹಲವು ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಈ ಯುವ ಪ್ರತಿಭೆಗೆ ಅರಸಿ ಬಂದ ಗೌರವಗಳು ಅನೇಕ.

ವಿಶೇಷ ಮಕ್ಕಳಿಗೆ ನೃತ್ಯ ಮತ್ತು ಯೋಗದ ಪರಿಮಾಣಕಾರಿತ್ವ  ಕುರಿತು ಪಿ.ಹೆಚ್‌ಡಿ ಮಾಡಿರುವ ಡಾ.ಪ್ರಿಯಾ ಗಣೇಶ್ ಗುರುವಿನ ಮಾರ್ಗದರ್ಶನ ಮತ್ತು ವೇದಿಕೆ ಅನುಭವ ಮೂಲಕ ಕು.ಶ್ರಾವ್ಯ ಪ್ರಸ್ತುತ ಪಡಿಸುವ ‘ರಂಗಪ್ರವೇಶ – ದೇವಿ ಉಪಾಸನೆ’ಯ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮತ್ತು ಅದಮ್ಯ ಚೇತನ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ವಾನಳ್ಳಿ, ಕಲಾಸ್ನೇಹಿ ನೃತ್ಯ ಯೋಗ ನಿರ್ದೇಶಕಿ ವಿದುಷಿ ಸ್ನೇಹಾ ನಾರಾಯಣ್ ಸಾಕ್ಷಿಯಾಗಲಿದ್ದಾರೆ.

ಕು|| ಕೃತಿ ನಾಗರಾಜ್ - ನಟುವಾಂಗ, ವಿ.ರೋಹನ್ ಭಟ್ ಉಪ್ಪೂರು – ಗಾಯನ, ವಿ.ಶ್ರೀಹರಿ ಅರ್. –ಮೃದಂಗ, ವಿ.ನರಸಿಂಹ ಮೂರ್ತಿ – ಕೊಳಲು, ವಿ.ಗೋಪಾಲ ವೆಂಕಟರಾಮನ್ – ವೀಣಾ ಸಂಗೀತ ಸಹಚರ್ಯದಲ್ಲಿ ಮೂಡಿಬರುವ ಕಾರ್ಯಕ್ರಮ ಕಲಾ ರಸಿಕರ ಮನಸೂರೆಗೊಳ್ಳಲಿದೆ. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top