ಅಮೆಜಾನ್ ಸಿಬ್ಬಂದಿಗೆ ವಿಶ್ರಾಂತಿ ಕೇಂದ್ರ

Upayuktha
0



ಮಂಗಳೂರು: ದೇಶದಾದ್ಯಂತ ತನ್ನ ಆಶ್ರಯ ಕೇಂದ್ರಗಳ ಜಾಲವನ್ನು ಈ ವರ್ಷಾಂತ್ಯದ ವೇಳೆಗೆ 100ಕ್ಕೆ ವಿಸ್ತರಿಸುವುದಾಗಿ ಅಮೆಜಾನ್ ಇಂಡಿಯಾ  ಪ್ರಕಟಿಸಿದೆ. 

ಈ ಆಶ್ರಯ ಕೇಂದ್ರಗಳು ಇ-ಕಾಮರ್ಸ್ ಮತ್ತು ಸರಕು ಸಾಗಣೆ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಸರಕು ವಿತರಣಾ ಸಿಬ್ಬಂದಿಗೆ ಹವಾನಿಯಂತ್ರಿತ ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ದೈಹಿಕ ಆಯಾಸ ನಿವಾರಿಸುವ ಎಲೆಕ್ಟ್ರೋಲೈಟ್‌ ಪಾನೀಯ ಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಶೌಚಾಲಯಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಮತ್ತು ಲಘು ತಿಂಡಿ ಹಾಗೂ ಪಾನೀಯ ಸೇವನೆ ಸೌಲಭ್ಯಗಳನ್ನು ನೀಡಲು ಮೀಸಲಾಗಿರುವ ವಿಶ್ರಾಂತಿ ತಾಣಗಳಾಗಿರುತ್ತವೆ.


ಸರಕುಗಳನ್ನು ವಿತರಿಸುವವರು ಮತ್ತು ಸರಕು ಸಾಗಣೆ ವಾಹನಗಳ ಸಿಬ್ಬಂದಿಯ ಬಳಕೆಗೆಂದೇ ಮಹಾನಗರಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುವ ಪ್ರದೇಶಗಳಲ್ಲಿ ಆರಂಭಿಸಲಾಗಿರುವ ಈ ವಿಶ್ರಾಂತಿ ಕೇಂದ್ರಗಳ ಸೌಲಭ್ಯವು ಇ- ಕಾಮರ್ಸ್‌ ಉದ್ಯಮದಲ್ಲಿ ಪರಿಚಯಿಸಲಾಗಿರುವ ಮೊದಲ ಆದ್ಯತೆ ಆಗಿದೆ ಎಂದು ಸಂಸ್ಥೆ ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top