ಸಾಹಿತ್ಯ ಕ್ಷೇತ್ರದ ವಿವಿಧ ಮಜಲುಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಕವಿ ಹಾ.ಮ. ಸತೀಶರ 'ಪರಸ್ಪರ' ಎನ್ನುವ ವೈಚಾರಿಕ ಲೇಖನಗಳ ಸಂಗ್ರಹವನ್ನು ಓದುತ್ತಿರುವಾಗ ಗಮನ ಸೆಳೆದ ಶೀರ್ಷಿಕೆಯೊಂದು ನೆನಪಾಯಿತು. "ಬುದ್ಧಿವಂತರೆನಿಸಿದ ದಡ್ಡರು. "ಹೌದಲ್ವಾ?' ಮೌನವಾಗಿರುವವರೆಲ್ಲ ಮಹಾಪಂಡಿತರಲ್ಲ, ಮಾತನಾಡುವವರೆಲ್ಲ ಶ್ರೇಷ್ಠರೂ ಅಲ್ಲ. 'ಬುದ್ಧಿವಂತರೆನಿಸುವುದು ಸುಲಭದ ಮಾತಲ್ಲ. ಬುದ್ಧಿಯೊಂದಿಗೆ ವಿವೇಚನೆಯೂ ಬೇಕು. ಇನ್ನೊಬ್ಬರಿಗೆ ಟೋಪಿ ಹಾಕುವ ಬುದ್ಧಿವಂತಿಕೆ ಬೇಡ. ಬಾಹ್ಯ ಆಡಂಬರದ ಶ್ರೇಷ್ಠತೆ ಬೇಡ. ಗುಣದಲ್ಲಿ ಶ್ರೇಷ್ಠತೆಯಿರಲಿ.
"ದೊಡ್ಡವರೆಲ್ಲ ಜಾಣರಲ್ಲ. ಚಿಕ್ಕವರೆಲ್ಲ ಕೋಣರಲ್ಲ". ಚಲನ ಚಿತ್ರದ ಹಾಡೊಂದು ನಮ್ಮನ್ನು ಸದಾ ಎಚ್ಚರಿಸುತ್ತದೆ. ನಾವೇನು ಮಾಡುತ್ತೇವೆ. ಕಾರು, ಬಂಗ್ಲೆ, ತೋಟ, ಮಣಗಟ್ಲೆ ಬಂಗಾರ, ಬೆಲೆಬಾಳುವ ಸೀರೆ ಹೊಂದಿದವರೇ ದೊಡ್ಡವರು, ಬುದ್ಧಿವಂತರೆನ್ನುವ ತೀರ್ಮಾನಕ್ಕೆ ಬರುತ್ತೇವೆ. (ಎಲ್ಲರಲ್ಲ, ಬೆರಳೆಣಿಕೆಯ ಮಂದಿ ಉತ್ತಮರಿರುತ್ತಾರೆ.) ಅವರ ಒಳಗಿನ ವ್ಯವಹಾರ, ಬುದ್ಧಿ ಅವಲೋಕಿಸಿದರೆ ಬರಿಯ ಗೋಳು ಅಷ್ಟೆ. "ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ" ಕಂಡ ಹಾಗೆ. ಯಾರನ್ನಾದರೂ ಜಾಣರೆಂದು ಕರೆಯುವ ಮೊದಲು ಅವಲೋಕಿಸಬೇಕು. ಅಲ್ಪರು, ಅರೆಬರೆ ಕಲಿತವರು, ತೋರಿಕೆಯ ನಟನಾಶೀಲರು, ಪ್ರಸಿದ್ಧಿ ಬೇಕೆಂದವರೆಲ್ಲ ತಾವೇ ಬುದ್ಧಿವಂತರೆಂದು ಸ್ವಯಂ ಘೋಷಣೆ ಮಾಡುತ್ತಾ ವೇದಿಕೆಯೇರುವ ಈ ಕಾಲಘಟ್ಟದಲ್ಲಿ ಏನು ಹೇಳಿದರೂ, "ಸಾಗರಕ್ಕೆ ನೀರು ಸುರಿದಂತೆ" ಆಗಬಹುದು. ಮುಖ ನೋಡಿ, ಸಂಪತ್ತು ನೋಡಿ ಮಣೆ ಹಾಕದಿರೋಣ. ಮನ್ನಣೆ ಕೊಡೋಣ, ಕೊಡುವಲ್ಲಿ ವಿಚಾರಿಸಿ, ವಿವೇಚಿಸಿ ಕೊಡೋಣ.
- ರತ್ನಾ ಕೆ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ