ಮನೆ ಅನ್ನೋದು ನಾವು ವಾಸ ಮಾಡುವ ಸ್ಥಳ. ಮನೆಯಲ್ಲಿ ನಾವು ನಿತ್ಯದ ಜೀವನವನ್ನು ನಡೆಸುತ್ತೇವೆ. ಕಷ್ಟ- ಸುಖ, ಸಂತೋಷವನ್ನು ಎಲ್ಲರೂ ಸೇರಿ ಹಂಚಿಕೊಳ್ಳುತ್ತೇವೆ ಮತ್ತು ಕಷ್ಟಗಳಲ್ಲಿ ಒಬ್ಬರಿಗೊಬ್ಬರು ಆಶ್ರಯವನ್ನು ಪಡೆಯುತ್ತೇವೆ. ಮನೆಯಲ್ಲಿ ಅಪ್ಪ- ಅಮ್ಮ , ತಮ್ಮ- ತಂಗಿ, ಅಣ್ಣ- ಅಕ್ಕ , ಅಜ್ಜ - ಅಜ್ಜಿ, ದೊಡ್ಡಮ್ಮ- ದೊಡ್ಡಪ್ಪ, ಚಿಕ್ಕಮ್ಮ- ಚಿಕ್ಕಪ್ಪ , ಅತ್ತೆ- ಮಾವ, ಎಲ್ಲರೂ ಸೇರಿ ವಾಸ ಮಾಡುತ್ತಾರೆ. ಅಪ್ಪ ಮನೆಯ ಯಜಮಾನರಾಗಿರುತ್ತಾರೆ.
ಪ್ರತಿದಿನ ಕಷ್ಟ ಪಟ್ಟು ಕೆಲಸ ಮಾಡಿ ಅಪ್ಪ ಎಲ್ಲರನ್ನೂ ಸಾಕುತ್ತಾರೆ. ಮನೆಯಲ್ಲಿ ಅಮ್ಮ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುವ ಜೊತೆಗೆ ಪ್ರೀತಿಯಿಂದ ಅಡುಗೆ ಮಾಡಿ ಊಟ ಮಾಡಿ ಸುತ್ತಾರೆ . ಅಪ್ಪ-ಅಮ್ಮ ಇಬ್ಬರು ಮಕ್ಕಳನ್ನು ಚೆನ್ನಾಗಿ ಸಾಕಿ ಬೆಳೆಸುತ್ತಾರೆ. ಮನೆಯೇ ಮೊದಲ ಪಾಠಶಾಲೆ ಅಮ್ಮನೇ ಮೊದಲ ಟೀಚರ್. ಶಾಲೆಯಲ್ಲಿ ಟೀಚರ್ ನೀಡಿದ ಹೋಂವರ್ಕ್ ಅನ್ನು ಅಮ್ಮ ಮಾಡಿಸುತ್ತಾರೆ. ಪ್ರತಿನಿತ್ಯ ಅಮ್ಮ ಒಳ್ಳೆಯ ನೀತಿ ಕಥೆಗಳನ್ನು ಹೇಳುತ್ತಾರೆ.
ನಾವು ಮನೆಯಲ್ಲಿ ಹೆಚ್ಚು ಹೆಚ್ಚು ಒಳ್ಳೆಯ ವಿಷಯಗಳನ್ನು ಕಲಿಯುತ್ತೇವೆ. ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ ಮಾಡುತ್ತೇವೆ. ಎಲ್ಲರೂ ಸೇರಿ ಕುಳಿತು ಊಟ ಮಾಡುತ್ತೇವೆ. ಅಪ್ಪ ಅಮ್ಮ ನಮಗೆ ಸ್ವಚ್ಛತೆಯ ಬಗ್ಗೆ ಕಲಿಸುತ್ತಾರೆ. ನಾವು ಹಿರಿಯರಿಗೆ ಹೇಗೆ ಗೌರವ ಕೊಟ್ಟು ನಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಹೀಗೆ ಮನೆ ನಮಗೆ ಎಲ್ಲವನ್ನು ಕೊಡುತ್ತದೆ ಮತ್ತು ಕಲಿಸುತ್ತದೆ. ಮನೆಯೆಂಬುದು ಕೇವಲ ಕಲ್ಲಿನಿಂದ ಮಣ್ಣಿನಿಂದ, ಇಟ್ಟಿಗೆಗಳಿಂದ, ಸಿಮೆಂಟ್ ನಿಂದ, ಕಟ್ಟಿದ ಕಟ್ಟಡವಲ್ಲ. ಅದು ನಮ್ಮ ಭಾವನೆಗಳ ಬಿಗಿಯಾದ ಬಂಧನ. ನಾವೆಲ್ಲರೂ ಒಗ್ಗಟ್ಟಾಗಿ ಕೂಡಿ ಬಾಳುವಂತೆ ಮಾಡುವ ಹಿತವಾದ ಸ್ಥಳ.
-ಸಿರಿ. ವಿ. ಸಿ.
3 ನೇ ತರಗತಿ
ಕೆ.ವಿ. ಸ್ಕೂಲ್ ಹಾಸನ,
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ