ಭಯೋತ್ಪಾದಕರ ಪರ ವಹಿಸುವವರ ಮೇಲೆ ಸುಮೋಟೋ ಕೇಸ್ ಹಾಕಿ: ನಂದನ್ ಮಲ್ಯ ಆಗ್ರಹ

Upayuktha
0


ಮಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಹೀನ ಕೃತ್ಯವನ್ನು ಭಾರತೀಯನಾಗಿ ಹಾಗೂ ಓರ್ವ ಹಿಂದೂವಾಗಿ ಖಂಡಿಸುತ್ತೇನೆ. ಧರ್ಮವನ್ನು ಕೇಳಿ ಹಣೆಗೆ ಗುಂಡು ಇಳಿಸಿದವರಿಗೆ ರೌರವ ನರಕವನ್ನು ನಮ್ಮ ಸೇನೆ ಕೊಡುವ ವಿಶ್ವಾಸ ಮತ್ತು ಸೇನೆಯ ಮೇಲೆ ನಂಬಿಕೆ ನಮಗೆ ಇದೆ ಎಂದು ಬಿಜೆಪಿ ಯುವ ಮೋರ್ಚ್ಅ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಹೇಳಿದ್ದಾರೆ.


ಇಡೀ ದೇಶ ಇಂಥಾ ಸಮಯದಲ್ಲಿ ಭಾರತ ಸರ್ಕಾರದ ಜೊತೆ ನಿಲ್ಲಬೇಕು. ಪಾಕಿಸ್ತಾನವನ್ನು ಭಯೋತ್ಪಾದಕರನ್ನ ಮಟ್ಟ ಹಾಕೋದಕ್ಕೆ ರಾಜಕೀಯ ಮರೆತು ಒಂದಾಗುವ ಸಮಯ. ಆದರೆ ಆ ಅಮಾಯಕ ಹಿಂದೂಗಳ ಹೆಣದ ಮುಂದೆ ಕೆಲ ದುಷ್ಟಬುದ್ಧಿಗಳು ರಾಜಕೀಯ ಮಾಡುತ್ತಿರುವುದು ಈ ದೇಶದ ದುರಂತ ಎಂದು ಅವರು ವಿಷಾದಿಸಿದರು.


ಯೂಟ್ಯೂಬ್‌ ವಾಹಿನಿಯಲ್ಲಿ, ಕಾಂಗ್ರೆಸ್‌ನ ವಕ್ತಾರ ಉದಯ್‌ ಆಚಾರ್ಯ ತಮ್ಮ ನಾಲಿಗೆಯನ್ನ ಹರಿಬಿಟ್ಟಿದ್ದಲ್ಲದೇ, ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಪ್ರತಿಭಟನೆಯ ಹಿಂದೆ ಬಿಜೆಪಿ ಪಕ್ಷವಿದೆ, ಮುಂಬರುವ ಬಿಹಾರ ಹಾಗೂ ಉತ್ತರ ಪ್ರದೇಶದ ಚುನಾವಣೆಯ ಸಲುವಾಗಿ ಬಿಜೆಪಿ ಇದನ್ನ ಮಾಡಿಸಿದೆ ಎನ್ನುವ ಮೂಲಕ  ಅತ್ಯಂತ ನೀಚ ರಾಜಕೀಯವನ್ನ ಮಾಡಿದ್ದಾರೆ ಎಂದು ನಂದನ್ ಮಲ್ಯ ಆರೋಪಿಸಿದರು.


ಚಿಕ್ಕ ಚಿಕ್ಕ ವಿಷಯಗಳಿಗೆ ಸುಮುಟೋ ಕೇಸ್‌ ಹಾಕಿ ಅರೆಸ್ಟ್‌ ಮಾಡುವ ಪೊಲೀಸರಿಗೆ ಈತನ ಹೇಳಿಕೆ ಕೇಳಿಸಲಿಲ್ಲವೇ? ಯಾವುದೇ ಆಧಾರ ಇಲ್ಲದೇ ಇಷ್ಟು ದೊಡ್ಡ ಆರೋಪವನ್ನ ದೇಶದ್ರೋಹದ ಕಳಂಕವನ್ನ ಬಿಜೆಪಿಯ ಮೇಲೆ ಹಾಗೂ ದೇಶದ ಪ್ರಧಾನ ಮಂತ್ರಿಗಳ ಮೇಲೆ ಹೊರಸಿರುವ ಕಾಂಗ್ರೆಸ್‌ ವಕ್ತಾರನ ಮೇಲೆ ಯಾವಾಗ ಕೇಸ್‌ ದಾಖಲಿಸುತ್ತೀರಾ? ಯಾವಾಗ ಅವರನ್ನ ಬಂಧಿಸುತ್ತೀರಾ? ಎಂದು ಅವರು ಪ್ರಶ್ನಿಸಿದರು.


ಭಾರತೀಯ ಜನತಾ ಪಾರ್ಟಿ ಶಿಸ್ತಿನ ಪಕ್ಷ. ದೇಶ ಪ್ರೇಮವನ್ನ ಮೈಗೂಡಿಸಿಕೊಂಡಿರೋ ಪಕ್ಷ. ಇಲ್ಲಿ ರಾಷ್ಟ್ರೀಯವಾದಿಗಳೇ ಹೆಚ್ಚು. ರಾಜಕೀಯಕ್ಕೋಸ್ಕರ ಚೀನಾ ಹಾಗೂ ಭಾರತದ ಶತ್ರುಗಳ ಜೊತೆ ಸಂಬಂಧ ಇಟ್ಟುಕೊಳ್ಳುವ ರಾಜಕೀಯ ಪಕ್ಷ ಇದಲ್ಲ. ಇಂಥಾ ಸಮಯದಲ್ಲೂ ಇಷ್ಟೊಂದು ನೀಚ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಯುವ ಮೋರ್ಚಾದಿಂದ, ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಓರ್ವ ಭಾರತೀಯನಾಗಿ ನಮ್ಮ ಕಡೆಯಿಂದ ಧಿಕ್ಕಾರ. ಆದಷ್ಟು ಬೇಗ ಇಂಥಾ ಸುಳ್ಳು ಆರೋಪ ಮಾಡಿ, ದೇಶದಲ್ಲಿ ದ್ವೇಷವನ್ನ ಹಬ್ಬಿಸುವ ಕೆಲಸ ಮಾಡುತ್ತಿರುವ ಉದಯ್‌ ಆಚಾರ್ಯ ಮೇಲೆ ಪೊಲೀಸರು ಈ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top