ಸಂಘಟನೆಗಳು ಸಮಾಜದ ದೀಪವಾಗಬೇಕು: ಶ್ರೀ ಶ್ರೀ ವಿದ್ಯೇಂದ್ರ ಶ್ರೀಪಾದರು

Upayuktha
0


ಮಂಗಳೂರು: ಸಂಘಟನೆಗಳು ಸಮಾಜದ ದೀಪವಾಗಬೇಕು. ಸಮಾಜಕ್ಕೆ ಮಾದರಿಯಾಗುವ ಕಾರ್ಯಗಳನ್ನು ಮಾಡಿದಾಗ ಮಾತ್ರ ಸಂಘಟನೆ ಪದದ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಚಿತ್ರಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ನುಡಿದರು.


ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಯೋಜಿಸಲಾದ ಗಾಯತ್ರಿ ಸಂಗಮ ಕಾರ್ಯಕ್ರಮದ ಉಳಿಕೆಯ ಹಣದಿಂದ ಜೀರ್ಣಾವಸ್ಥೆಯಲ್ಲಿರುವ ವಿಪ್ರ ಸಮಾಜದ ತೀರ ಬಡ ಕುಟುಂಬದ ಅರ್ಹರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಲು ಸಹಾಯ ಮಾಡುವ ಉದ್ದೇಶದಿಂದ ಮೋಂತಿಮಾರ್ ಸಮೀಪದ ಸದಾಶಿವ ಭಟ್ ಅವರಿಗೆ ಎರಡೂವರೆ ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿ ಶುಭ ಹಾರೈಸಿದರು.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಉದ್ಯಮಿ ರಘುನಾಥ ಸೋಮಯಾಜಿ ಅವರು ಮಾತನಾಡಿ, ಸಮುದಾಯದ ಅಶಕ್ತ ಬ್ರಾಹ್ಮಣರಿಗೆ ಮನೆ ನಿರ್ಮಾಣಕ್ಕಾಗಿ ಸಹಾಯ ಮಾಡಲು 50 ಲಕ್ಷ ರೂ. ಮೊತ್ತವನ್ನು ದೇಣಿಗೆಯಾಗಿ ನೀಡುತ್ತೇನೆ. ಮಹಾಸಭಾವು ಅಶಕ್ತ ಬ್ರಾಹ್ಮಣರನ್ನು ಗುರುತಿಸಿ ಸೂಚಿಸಬೇಕು. ತಾನು ಮನೆ ಒಂದಕ್ಕೆ ಎರಡೂವರೆ ಲಕ್ಷ ದೇಣಿಗೆ ನೀಡುತ್ತೇನೆ. ಉಳಿದ ಎರಡೂವರೆ ಲಕ್ಷವನ್ನು ರೂ.ಯನ್ನು ಮಹಾಸಭಾವು ಹೊಂದಿಸಿಕೊಳ್ಳಬೇಕೆಂದು ಎಂದು ಘೋಷಣೆ ಮಾಡಿದ್ದರು.


ಈ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮಹೇಶ್ ಕಜೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಮತ್ತು ಜಿಲ್ಲಾ ಸಂಚಾಲಕರು ತಾಲೂಕು ಸಂಚಾಲಕರೊAದಿಗೆ ಸಮಾಲೋಚಿಸಿ, ಮೋಂತಿಮಾರು ಸದಾಶಿವ ಭಟ್ ಅವರಿಗೆ ಮನೆ ನಿರ್ಮಾಣಕ್ಕೆ ಸಹಾಯದನ ನೀಡಲು ತೀರ್ಮಾನಿಸಲಾಯಿತು.


ಮೋಂತಿಮಾರು ಸದಾಶಿವ ಭಟ್ ಅವರು, ತನ್ನ ಬದುಕಿನ 35ಕ್ಕೂ ಅಧಿಕ ವರ್ಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಮಚಂದ್ರಪುರ ಮಠ ಮತ್ತು ಕೊಂಡೆವೂರು ಮಠದಲ್ಲಿ ಸೇವೆ ಸಲ್ಲಿಸಿದ್ದರು. ಸಮಾಜಕ್ಕಾಗಿ ತಮ್ಮ ಬದುಕನ್ನೇ ಶ್ರೀಗಂಧದಂತೆ ತೇದುಕೊಂಡ ಅವರು, ಅನಿವಾರ್ಯ ಕಾರಣದಿಂದಾಗಿ ತನ್ನ ಹುಟ್ಟೂರಿಗೆ ಬಂದು ದೇವಸ್ಥಾನವೊಂದರ ಪೂಜಾ ಕೈಂಕರ್ಯಕ್ಕೆ ತೊಡಗಿಸಿಕೊಂಡಿದ್ದರು. ಸುಮಾರು 125 ವರ್ಷಕ್ಕೂ ಹಿಂದೆ ನಿರ್ಮಾಣವಾಗಿರುವ ಜೀರ್ಣಾವಸ್ಥೆಯಲ್ಲಿರುವ ಅವರ ಮನೆಯ ಪರಿಸ್ಥಿತಿಯನ್ನು ಪರಿಗಣಿಸಿ, ರಾಜ್ಯಾಧ್ಯಕ್ಷರಾದ ಅಶೋಕ್ ಹಾರ್ನಹಳ್ಳಿ ಅವರೊಂದಿಗೆ ಸಮಾಲೋಚನೆ ನಡೆಸಿ ಮನೆ ದುರಸ್ತಿಗಾಗಿ 5 ಲಕ್ಷ ರೂ, ದೇಣಿಗೆ ನೀಡಲು ತೀರ್ಮಾನಿಸಲಾಯಿತು.


ಬಳಿಕ ಮಾತನಾಡಿದ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ಈ ಯೋಜನೆ ಅನುಸಾರ ಹಂತ ಹಂತವಾಗಿ ಫಲಾನುಭವಿಗೆ ಅನುದಾನ ನೀಡಲಾಗುವುದು. ಸದುದ್ದೇಶಕ್ಕಾಗಿ ಸಮಾಜದ ದಾನಿಗಳಿಂದ ಸಂಗ್ರಹಿತವಾದ ಹಣವಾಗಿದ್ದು, ಹಣ ಪೋಲಾಗದಂತೆ ಜಾಗೃತೆ ವಹಿಸಲಾಗುವುದು. ಫಲಾನುಭವಿಗಳ ಆಯ್ಕೆಯಲ್ಲೂ ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದರು.


ರಘುನಾಥ ಸೋಮಯಾಜಿ ಮಾತನಾಡಿ, ತನ್ನ ಸಮಾಜಮುಖಿ ಚಿಂತನೆಗೆ ಮಂಗಳೂರಿನ ಜಿಲ್ಲಾ ಘಟಕ ಸ್ಪರ್ಧಿಸಿ, ಅತ್ಯಂತ ಯೋಗ್ಯ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಇದರಿಂದಾಗಿ ತನಗೆ ಸಾರ್ಥಕದ ಭಾವನೆ ಮೂಡುತ್ತದೆ. ಬ್ರಾಹ್ಮಣ ಮಹಾಸಭಾವು ತೆಗೆದುಕೊಳ್ಳುವ ಸಮಾಜಮುಖಿ ಕೆಲಸಗಳಿಗೆ ಸದಾ ಕೈ ಜೋಡಿಸುತ್ತೇನೆ ಎಂಬ ಆಶ್ವಾಸನೆ ನೀಡಿದರು.


ರಾಷ್ಟ್ರ, ಧರ್ಮ ಸೇವೆಗಾಗಿ ಬದುಕನ್ನು ಮೀಸಲಿಟ್ಟ ಮೋಂತಿಮಾರು ಸದಾಶಿವ ಭಟ್ ಅವರ ಕುರಿತು ಜಗದೀಶ ಕಾರಂತರು ಮುಡಿಪು ವಿವರ ನೀಡಿದರು. ಜಿಲ್ಲಾ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಘಟನೆಯ ಯುವ ವಿಭಾಗದ ರಾಜ್ಯ ಸಹಸಂಚಾಲಕ ಸುಬ್ರಮಣ್ಯ ಕೊರಿಯರ್ ಧನ್ಯವಾದ ಸಮರ್ಪಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಗಿರಿ ಪ್ರಕಾಶ್ ತಂತ್ರಿ, ಸುಬ್ರಮಣ್ಯ ಸಭಾದ ಉದಯಕುಮಾರ್, ಚಿತ್ಪಾವನ ಸಮಾಜದ ಶ್ರೀಕರ ದಾಮ್ಲೆ, ಲೆಕ್ಕ ಪರಿಶೋಧಕ ಆರ್.ಡಿ. ಶಾಸ್ತ್ರಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top