ನಂತೂರು: 2ನೇ ವರ್ಷದ ಶಂಕರಶ್ರೀ ವಸಂತ ವೇದಪಾಠಶಾಲೆಯ ಉದ್ಘಾಟನೆ

Upayuktha
1 minute read
0


ವಿಟ್ಲ: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ 2ನೇ ವರ್ಷದ ಶಂಕರಶ್ರೀ ವಸಂತ ವೇದ ಪಾಠ ಶಾಲೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 


ಕೇಂದ್ರ ಸರಕು ಮತ್ತು ಸೇವಾ ಇಲಾಖೆಯ ಸಹಾಯ ಆಯುಕ್ತ ಮಧುಸೂದನ ಭಟ್ ಉದ್ಘಾಟಿಸಿದರು. ಪುತ್ತೂರು ದ್ವಾರಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ವೇದ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಗೊಳ್ಳುವಲ್ಲಿ ನಿತ್ಯಾನುಷ್ಠಾನಕ್ಕೆ ಬೇಕಾದ ಪಾಠಗಳ ಕಲಿತು ಅನುಷ್ಠಾನ ಗೊಳಿಸಬೇಕು ಎಂದರು.


ಸಂಸ್ಥೆಯ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮಚಂದ್ರಾಪುರ ಮಠದ ಮಂಗಳೂರು ಹವ್ಯಕ ಮಂಡಲದ ವೈದಿಕ ಪ್ರಧಾನರೂ ಶಿಬಿರದ ಪ್ರಧಾನ ಗುರುಗಳೂ ಆದ ವೇ.ಮೂ. ಶಿವಪ್ರಸಾದ ಭಟ್ಟ ಅಮೈ, ದ.ಕ.ಮತ್ತು ಕಾಸರಗೋಡು ಹವ್ಯಕ ಮಹಾಜನಸಭಾದ ಅಧ್ಯಕ್ಷ ಗಿರೀಶ್ಚಂದ್ರ ಆಲಂಗಾರು, ಮಂಗಳೂರು ಹವ್ಯಕ ಸಭಾ ಅಧ್ಯಕ್ಷರಾದ ಗೀತಾದೇವಿ ಚೂಂತಾರು, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿ ಕಾರ್ಯದರ್ಶಿ  ಶ್ರೀಕೃಷ್ಣ ನೀರಮೂಲೆ, ಮಂಗಳೂರು ರುದ್ರ ಸಮಿತಿಯ ಸಂಚಾಲಕ ಡಾ.ಬಿ.ರಾಜೇಂದ್ರ ಪ್ರಸಾದ್, ಶ್ರೀ ಭಾರತೀ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ಜಿ ಕೆ ಭಟ್ಟ ಸೇರಾಜೆ, ಮಂಗಳೂರು ಉತ್ತರ ವಲಯಾಧ್ಯಕ್ಷ ಡಾ. ಶಿವಶಂಕರ ಭಟ್ ಕೆ, ಮಧ್ಯ ವಲಯಾಧ್ಯಕ್ಷ ಕಬೆಕ್ಕೋಡು ಬಾಲಸುಬ್ರಹ್ಮಣ್ಯ ಭಟ್, ದಕ್ಷಿಣ ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಕಾಶಿಮಠ ಉಪಸ್ಥಿತರಿದ್ದರು.


ಮಂಗಳೂರು ಹವ್ಯಕ ಮಂಡಲಾಧ್ಯಕ್ಷ ಉದಯಶಂಕರ್ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಮಂಡಲ ಸಹಾಯ ಪ್ರಧಾನ ಹೊಸಮನೆ ಭಾಸ್ಕರ ಭಟ್ಟ ವಂದಿಸಿದರು. ಬಳಿಕ ಶಿಬಿರದ ತರಗತಿಗಳು ಆರಂಭಗೊಂಡವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top