ಜೀವನದಲ್ಲಿ ನಾವು ನಮ್ಮ ಅಂತ್ಯದವರೆಗೆ ಅನೇಕ ಪಾಠಗಳನ್ನು ಕಲಿತಿರುತ್ತೇವೆ. ಕೆಲವೊಂದು ಔಪಚಾರಿಕವಾಗಿ ಕಲಿತರೆ, ಮತ್ತೊಂದಿಷ್ಟು ಅನೌಪಚರಿಕವಾಗಿ ಕಳಿತಿರುತ್ತೇವೆ. ಎಷ್ಟೋ ಸಾರಿ. ಯಾವ ವಿಶ್ವವಿದ್ಯಾನಿಲಯಗಳು ಕಲಿಸದ ಪಾಠಗಳನ್ನು ಕೆಲವೊಂದು ಸಾರಿ ಅನುಭವಗಳು ಕಳಿಸಿ ಕೊಡುತ್ತದೆ.
ಅನುಭವಗಳನ್ನು ನಾವು ಎರಡು ರೀತಿಯಲ್ಲಿ ವಿಭಾಗಿಸಬಹುದು. ಸಿಹಿ ಅನುಭವಗಳು ನಮ್ಮ ಜೀವನ ಎಂಬ ಬುತ್ತಿಯಲ್ಲಿ ಸಿಹಿ ತುತ್ತಾದರೆ ಕಹಿ ಅನುಭವಗಳು ಹಾಗಲಕಾಯಿ ಪಲ್ಯ ಇದ್ದ ಹಾಗೆ. ನಾಲಿಗೆಗೆ ಕಹಿ ಅನುಭವ ಕೊಟ್ಟರೂ ಜೀವನಕ್ಕೆ ಒಂದು ಭದ್ರ ತಳಹದಿಯನ್ನು ನೀಡುತ್ತದೆ.
ಸಿಹಿ ಅನುಭವಗಳು ಜೀವನದಲ್ಲಿ ಮೆಲುಕು ಹಾಕುವಂತಹ feeling ಕೊಟ್ಟರೆ ಕಹಿ ಅನುಭವಗಳು ಮೇಷ್ಟ್ರ ಕೈಯ್ಯಲ್ಲಿ ಇರುವ ಬೆತ್ತದಂತೆ. ನಮ್ಮನ್ನು ತಿದ್ದುವ ಕೆಲಸವನ್ನು ಮಾಡುತ್ತವೆ. "ಅಯ್ಯೋ ಬೇಡಪ್ಪಾ, ನಾನು ಸತ್ತರೂ ಅಲ್ಲಿ ಕಾಲಿಡುವುದಿಲ್ಲ, ಅವರ ತಂಟೆಗೆ ಹೋಗುವುದಿಲ್ಲ" ಎಂಬ ಉದ್ಗಾರಗಳು ಕಹಿ ಅನುಭವಗಳ ಅಸ್ತಿತ್ವ ತೋರಿಸುತ್ತದೆ. ಸಿಹಿ ಅನುಭವಗಳು ನಮ್ಮ ವಿಜಯದ, ಯಶಸ್ಸಿನ ಸಂಕೇತವಾದರೆ, ಕಹಿ ಅನುಭಗಳು ನಮ್ಮ ಹತಾಶೆಯ, ಅನುಭವಿಸಿದ ಅವಮಾನಗಳ, ತಿರಸ್ಕಾರಗಳ ಸಂಕೇತವಾಗಿವೆ. ನಮ್ಮನ್ನು ಫುಟ್ಬಾಲ್‌ನಂತೆ ನಮ್ಮನ್ನು ಒದ್ದು ಜನ ತಮ್ಮ ಗೋಲು ಹೊಡೆದ ಅಭಿವ್ಯಕ್ತಿಗಳಾಗಿವೆ.
ಆದರೆ ನಮ್ಮ ಜೀವನದಲ್ಲಿ ಅನುಭವಗಳು ಹಾಸುಹೊಕ್ಕಾಗಿದೆ. ಸಿಹಿ ಅನುಭವಗಳು ಜನರನ್ನು. ನಂಬುವಂತೆ ಹೇಳಿ. ಕೊಟ್ಟರೆ, ಕಹಿ ಅನುಭವಗಳು ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದನ್ನು ಕಳಿಸಿ ಕೊಡುತ್ತದೆ. ಅದು. ಒಂದು ರೀತಿಯಲ್ಲಿ "ಬಡಿಗೆ ಚಮ್ ಚಾಮ್, ವಿದ್ಯೆ ಘಮ್, ಘಾಮ್" ಎನ್ನುವ ಹಾಗೆ. ಹೀಗಾಗಿ ನಮ್ಮ ಜೀವನದಲ್ಲಿ ಸಿಹಿ ಅನುಭವಗಳು BMW ಕಾರ್ ಆದರೆ, ಕಹಿ ಅನುಭವ ಟ್ರಾಫಿಕ್ inspector ಇದ್ದ ಹಾಗೆ.
ಹೀಗಾಗಿ ನಮ್ಮ ಜೀವನದಲ್ಲಿ, ಅನುಭವ ಎಂಬ ಬ್ರೇಕ್ ಬೇಕೇ ಬೇಕು. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ