ವಿಷು ಕಣಿಯು ಬಂತು
ಹೊಸ ಹುರುಪು ತಂತು
ಇಂದೀಗ ಮಡುಗೆಕ್ಕು
ಕಣಿಯ ಚೆಂದಲ್ಲಿ
ಬೇಕು ದೇವರ ಮಣೆಲಿ
ಸೊಲುದ ತೆಂಗಿನ ಕಾಯಿ
ಗೋಳಸಂಪಿಗೆ ಹೂಗು
ಬೀಜ ಹಣ್ಣು
ದೇವರೆದುರಿಲಿ ಇರಲಿ
ಕನ್ನಾಟಿ ಚಿನ್ನ ಸರ
ಮಣೆಲಿರಲಿ ಹೊಸತಾದ
ಪಂಚಾಂಗ ಕೂಡಾ
ಬೀಜ ಹಾಕಿದ ಪಾಯ್ಸ
ಮತ್ತೆ ಹಲಬಗೆ ಭಕ್ಷ್ಯ
ಮಡುಗಿ ದೇವರ ಎದುರು
ಪ್ರಸಾದವಾಗಿ
ಕಣಿಯ ತೆಕ್ಕೊಂಡೆಲ್ಲ
ಬಕ್ಕಂದು ನೆರೆಯೋರು
ಅಳು ಕಾಳುಗೋ ಹಾಂಗೆ
ಇತ್ತು ಪರಿಪಾಠ
ಹೆಂಗಿದ್ದರೂ ಕಣಿಯ
ಮಡುಗಿ ಹಿರಿಯೋರಿಂಗೆ
ನಮಿಸಿ ಆಶೀರ್ವಾದ
ಬೇಡುಲಿದ್ದು
- ಡಾ ಸುರೇಶ ನೆಗಳಗುಳಿ, ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ