ಕುರುಗೋಡು ತಾಲೂಕಿನ ವದ್ದಟ್ಟಿ ಕ್ರಾಸ್ನ ಯುವತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ವಿಷಯ ತಿಳಿದ ಯುವತಿಯ ತಾಯಿ ವಿರೋಧಿಸಿ ದೇವದಾಸಿಯಾಗಿ ಮಾಡಲು ಮುಂದಾಗಿದ್ದರು.
ತಾಯಿಯ ನಿರ್ಧಾರ ಒಪ್ಪದ ಯುವತಿ, ಪುನರ್ವಸತಿ ಕಲ್ಪಿತ ದೇವದಾಸಿಯರ ವಿಮೋಚನಾ ಸಂಘವನ್ನು ಸಂಪರ್ಕಿಸಿದ್ದಾಳೆ. ಸಂಘದವರು ಕೂಡಲೇ ಕುರುಗೋಡು ಠಾಣೆಯ ಪಿಎಸ್‌ಐ ಸುಪ್ರಿತ್ ಅವರಿಗೆ ಮಾಹಿತಿ ನೀಡಿದ್ದರು. ಪಿಎಸ್ಐ ಯುವತಿ ಮತ್ತು ಯುವಕನ ಕುಟುಂಬದವರನ್ನು ಠಾಣೆಗೆ ಕರೆಯಿಸಿ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿ ಸಮ್ಮುಖದಲ್ಲಿಯೇ ಕುರುಗೋಡಿನ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ.
ದೇವದಾಸಿ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ಕಾಯ್ದೆ ಕಟ್ಟಳೆಗಳನ್ನು ಜಾರಿ ಮಾಡಿದ್ದರೂ ತೆರೆಮರೆಯಲ್ಲಿ ಇನ್ನೂ ನಡೆಯುತ್ತಲೇ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತ್ತರಾಗಿ ಆಗಬೇಕಿದ್ದ ಅನಾಹುತತಡೆದಿರುವ ಪೊಲೀಸರ ಕಾರ್ಯವು ಪ್ರಶಂಸನೀಯವಾಗಿದೆ.
ಒಮ್ಮೆ ಮುತ್ತು ಕಟ್ಟಿ ದೇವದಾಸಿಯಾಗಿ ದೇವಾಲಯಕ್ಕೆ ಸಮರ್ಪಿಸಲಾದ ಯುವತಿ ಜೀವನಪರ್ಯಂತ ಎಲ್ಲಾ ರೀತಿಯಲ್ಲಿ ದೇವಾಲಯಕ್ಕೆ ಸೇವೆ ಸಲ್ಲಿಸಬೇಕು. ಆಚರಣೆಗಳನ್ನು ನಿರ್ವಹಿಸಬೇಕು. ಇಂಥ ಪದ್ಧತಿಗೆ ಬಹಳಷ್ಟು ಬಡ ಮತ್ತು ಹಿಂದುಳಿದ ಸಮುದಾಯಗಳ ಯುವತಿಯರ ಜೀವನ ಹಾಳಾಗಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ