ಮುಂಬಯಿ, ಕರಾವಳಿ ಕುಲಾಲರ ಸಮಾಗಮ ಸಾಧಕರಿಗೆ ಸನ್ಮಾನ

ಮಂಗಳೂರು: ಮಂಗಳೂರಿನ ಕುಲಾಲ ಪ್ರತಿಷ್ಠಾನದ ವತಿಯಿಂದ ಮುಂಬಯಿ ಮತ್ತು ಕರಾವಳಿ ಕುಲಾಲರ ಮಹಾಸಂಗಮ ಕುಲಾಲ ಪರ್ಬ ಭಾನುವಾರ ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಮಾರಂಭವನ್ನು ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಉದ್ಘಾಟಿಸಿದರು.
25 ಮಂದಿಗೆ ಕುಲಾಲ ಸಾಧಕ ಪ್ರಶಸ್ತಿ:
ದೊಡ್ಡಯ್ಯ ಮೂಲ್ಯ ಕಟೀಲು, ಪೃಥ್ವಿರಾಜ್ ಎಡಪದವು, ಸತೀಶ್ ಮಂಜೇಶ್ವರ, ಕೃಷ್ಣ ಮೂಲ್ಯ ಕೈರಂಗಳ, ರಾಧಾಕೃಷ್ಣ ಮೂಲ್ಯ ಸೂರತ್, ಶಶಿಧರ್ ಮಾಣಿ, ಸಂಜೀವ ಮೂಲ್ಯ, ಚಂದ್ರಶೇಖರ ಕುಲಾಲ್, ಸುರೇಶ್ ಕುಲಾಲ್, ಕೃಷ್ಣ ಗೋರಿಗುಡ್ಡೆ, ಸುಜಿತ್ ಕೊಂಚಾಡಿ, ಡಾ.ಶ್ರೀನಿವಾಸ್ ಎನ್, ಕ್ಷಮಾ ರಮಾನಂದ ಬಂಗೇರ ಸಮಾರೋಪ ಸಮಾರಂಭದಲ್ಲಿ ಮುಂಬಯಿ ಉದ್ಯಮಿ ಸುನಿಲ್ ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ದಂಪತಿಗೆ ಗೌರವಾಭಿನಂದನೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಅಮಿತಾ ಕಲಾಮಂದಿರದ ಅಮಿತ ಜಿತಿನ್ ಮೂಲ್ಯತಂಡ, ನಟನಾ ನೃತ್ಯ ಅಕಾಡೆಮಿಯ ಗೀತಾ ಸಾಲ್ಯಾನ್ ತಂಡದ ವರಿಂದ ನೃತ್ಯ ಪ್ರದರ್ಶನಗೊಂಡಿತು. ಮಂಗಳೂರಿನ ಸವಿಜೀವನಂ ನೃತ್ಯಾಲಯದ ಸವಿತಾ ಜೀವನ್ ತಂಡ, ವಿದುಷಿ ಮಾನಸ ಕುಲಾಲ್, ವಿದುಷಿ ಸಿಂಚನ ಎಸ್ ಕುಲಾಲ್ ಅವರಿಂದ ವೈವಿಧ್ಯಮಯ ನೃತ್ಯ ವೈಭವ ಮನರಂಜಿಸಿತು. ಕಲಾವಿದ ಗಣೇಶ್ ಎರ್ಮಾಳ್ ಅವರ ಗಾಯನ, ನಾಗೇಶ್ ಕುಲಾಲ್ ಸಾರಥ್ಯದ ತಂಡ ಪ್ರದರ್ಶಿಸಿದ ಮಣ್ಣಾ ಬಾಜನ ನಾಟಕ ಮನಸೂರೆಗೊಂಡಿತು.
ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಮಾಜಿ ಅಧ್ಯಕ್ಷ ಎಂ.ಪಿ. ಬಂಗೇರ, ನ್ಯಾಯವಾದಿ, ಕುಲಶೇಖರ ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್‌ನ ಅಧ್ಯಕ್ಷ ರಾಮಪ್ರಸಾದ್ ಎಸ್., ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಕನ್ನಡ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್ ಮತ್ತಿತರರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ